ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಬಿಇಓ ಪತ್ತಾರ
ಮುಧೋಳ 16: ಮುಧೋಳ ತಾಲೂಕಿನಲ್ಲಿ 2020- 21 ನೇ ಸಾಲಿನ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ಕೆಲವು ವಿಕಲಚೇತನ ಎಸ್ ಎಸ್ ಎಲ್ ಸಿ ಮಕ್ಕಳ ಮನೆಗೆ ಮುಧೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿ ಎಂ ಪತ್ತಾರ್ ರವರು ಭೇಟಿ ನೀಡಿ ಪರೀಕ್ಷಾ ಭಯ ಹೋಗಲಾಡಿಸಿ ಬದಲಾದ ಪರೀಕ್ಷಾ ಕ್ರಮದ ಬಗ್ಗೆ ಮಾಹಿತಿ ನೀಡಿ ಮತ್ತು ಓಎಂಆರ್ ಹಾಗೂ ಪ್ರಶ್ನೆ ಪತ್ರಿಕೆ ಬಗ್ಗೆ ತಿಳಿ ಹೇಳಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಯಶಸ್ವಿಯಾಗಿರಿ ಎಂದು ಪಾಲಕರ ಸಮ್ಮುಖದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು .ಸಮನ್ವಯ ಶಿಕ್ಷಣಾಧಿಕಾರಿ ಬಿ ಎಂ ಮಂತ್ರಿ, ಎಎಂ ಕೆಂಭಾವಿ, ಮುಖ್ಯಗುರುಗಳು ಬಿ.ಬಿ.ಶಿಕ್ಕೆರಿ ಇನ್ನೀತರರು ಹಾಜರಿದ್ದರು.