ದೇವರಾಜ ಅರಸ ವಿಧ್ಯಾರ್ಥಿ ವಸತಿ ನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
World Environment Day celebrated at Devaraj Urs Student Hostel
ಬೈಲಹೊಂಗಲ 06 : ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಹತ್ತು ಗಿಡಗಳನ್ನು ಹಚ್ಚುವ ಪ್ರಮಾಣ ಮಾಡಬೇಕೆಂದು ತಹಶೀಲ್ದಾರ ಸದಾಶಿವ ಮಕ್ಕೋಜಿ ಹೇಳಿದರು.ಪಟ್ಟಣದ ದೇವರಾಜ ಅರಸ ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ವಿಧ್ಯಾರ್ಥಿ ವಸತಿ ನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗೆ ನಿರುಣಿಸಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದರು.
ಬೈಲಹೊಂಗಲ ವಲಯ ಅರಣ್ಯಾಧಿಕಾರಿ ಸುರೇಶ ದೊಡ್ಡಬಸನ್ನವರ ಮಾತನಾಡಿ, ಪ್ರಕೃತಿಯಿಂದ ಪ್ರೇರಿತರಾಗಿ ಹವಾಮಾನಕ್ಕಾಗಿ ನಮ್ಮ ಭವಿಷ್ಯಕ್ಕಾಗಿ ಎಂಬ ಧ್ಯೇಯ ವಾಕ್ಯ ದೊಂದಿಗೆ ಪರಿಸರ ಉಳಿವು ಬೆಳವಣಿಗೆಗೆ ಭವಿಷ್ಯದ ಜಾಗತಿಕ ತಾಪಮಾನ ಕಡಿಮೆ ಮಾಡಲು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.ತಾಪಂ ಇಓ ಸಂಜೀವ ಜುನ್ನೂರ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶದಲ್ಲಿ ನಾವು ಭಾಗಿಯಾಗಬಾರದು.
ಬೇರೆ ಬೇರೆ ದೇಶಗಳಲ್ಲಿ ಪರಿಸರ ರಕ್ಷಣೆಗೆ ಇರುವ ಕಠಿಣ ಕಾನೂನು ಗಳನ್ನು ನೆನಪಿಸಿ ನಮ್ಮ ಮನದಲ್ಲಿ ಪರಿಸರ ಉಳಿವಿಗೆ ಕಠಿಣ ನಡುವಳಿಕೆ ಅಳವಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ತಾಪಂ ನಿರ್ದೆಶಕ ಅಪ್ಪಯ್ಯಪ್ಪ ಎಸ್.ಕೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಬೈಲಹೊಂಗಲ ಮತಕ್ಷೇತ್ರ ಶಾಲಾ ಸುಧಾರಣಾ ಸಮಿತಿ ಸದಸ್ಯ ಹಸನ ಗೊರವನಕೊಳ್ಳ, ಡಾ. ಬಿ.ಆರ್.ಅಂಬೇಡ್ಕರ ಸೇನೆ ವಿಭಾಗಿಯ ರಾಜ್ಯಾಧ್ಯಾಕ್ಷ ಸಂಜಯ ಮುರಗೋಡ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎಂ.ಬಿ.ಚಿನಗುಡಿ, ವಿಸ್ತೀರ್ಣಾಧಿಕಾರಿ ಮಂಜುನಾಥ ವಾಯ್ ಕರಿಸಿರಿ, ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 