ಬಿಜೆಪಿಯಿಂದ ವಿಶ್ವ ಪರಿಸರ ದಿನ ಆಚರಣೆ
BJP celebrates World Environment Day
ಲೋಕದರ್ಶನ ವರದಿ
ಬಾಗಲಕೋಟೆ 06 : ಭಾರತೀಯ ಜನತಾ ಪಾರ್ಟಿ ಹಾಗೂ ನಗರಸಭೆ ವತಿಯಿಂದ ವಿಧಾನ ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ ಅವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ನಗರದ ಹಳೇ ಪ್ರವಾಸಿ ಮಂದಿರದ ಆವರಣದಲ್ಲಿ ಸ್ವಚ್ಛತೆ ಮಾಡಿ ಸಸಿನೆಟ್ಟು ನೀರು ಹಾಕುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ತಾಯಿ ಹೆಸರಿನಲ್ಲಿ ಒಂದು ಸಸಿ ನೆಟ್ಟು ಪೋಷಿಸಲು ಕರೆ ನೀಡಿರುವುದು ಆ ಹಿನ್ನೆಲೆಯಲ್ಲಿ ನಮ್ಮ ಸುತ್ತಮುತ್ತಲಿನ ವಾತಾವರಣ ಹಸಿರಿಕರಣಮಾಡಿದಾಗ ಮಾತ್ರ ಸಮೃದ್ದ ನಾಡು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ವಿಪ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಜಾಗತಿಕ ತಾಪಮಾನದಿಂದ ಇಡೀ ವಿಶ್ವವೇ ನಲಗುತ್ತಿದೆ ಆದ್ದರಿಂದ ಕಾಡುಗಳನ್ನು ಬೆಳಸಬೇಕು ಮತ್ತು ಉಳಿಸಬೇಕಾಗಿದೆ.ಪರಿಸರ ಉಳಿಸಿದರೆ ದೇಶ ಉಳಿದಿತ್ತು. ಪರಿಸರ ನಾಶವಾಗಬಾರದು ಅದನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಸವಿತಾ ಲೆಂಕೆನ್ನವರ , ಶಿವು ಹಣಮಕನ್ನವರ , ನಿವೃತ ಪ್ರಾಧ್ಯಾಪಕರಾದ ಮಹಾಂತೇಶ ಸಂಗಮ, ಮದಕಟ್ಟಿ , ವಾರ್ಡ್ ಅಧ್ಯಕ್ಷರಾದ ಯಚ್ಚರೇಶ್ ಮಾಯಾಚಾರಿ, ರಾಜು ಶಿಂತ್ರೆ, ದತ್ತು ಶಹಾಪುರ , ಡಾ. ಶೇಖರ ಮಾನೆ , ಶಂಭುಗೌಡ ಪಾಟೀಲ್, ಚಂದ್ರಕಾಂತ ಕೇಸನೂರ, ರಾಜು ಚಿತ್ತವಾಡಗಿ, ಯಲ್ಲಪ್ಪ ಅಂಬಿಗೇರ, ಕುಮಾರ್ ಗಿರಿಜಾ, ಅಪ್ಪಣ್ಣ ಲೆಂಕೆನ್ನವರ, ಮಲ್ಲಿಕಾರ್ಜುನ್ ಸುರಪುರ, ಶಾಂತಾಬಾಯಿ ಗೋಣಿ, ಶೈಲು ಅಂಗಡಿ, ರಾಜು ಗೌಳಿ, ರಾಜು ಶ್ರೀರಾಮ, ನಗರಸಭೆ ಅಧಿಕಾರಿಗಳಾದ ಸತೀಶ ಖಜಿಡೋಣಿ, ಹಾಗೂ ಖಾಜಿ ಇನ್ನುಳಿದ ಅಧಿಕಾರಿಗಳುಸಿಬ್ಬಂದಿ ವರ್ಗದವರು, ಮತ್ತು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಭಾಗವಹಿಸಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 