ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡಿಲ್ಲ: ಬೊಮ್ಮಾಯಿ
I have not engaged in hate politics against anyone: Bommai
ಶಿಗ್ಗಾವಿ 06: ನಾನು ಸಕಾರಾತ್ಮಕ ರಾಜಕಾರಣದ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿದ್ದೇನೆ. ಸಕಾರಾತ್ಮಕ ರಾಜಕಾರಣವನ್ನೇ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾದರೂ ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡಿಲ್ಲ. ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಸವಣೂರ ರಸ್ತೆಯಲ್ಲಿರುವ ನಿವಾಸದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ದಿವಂಗತ ಎಸ್ ಆರ್ ಬೊಮ್ಮಾಯಿ 102 ನೇಯ ಜನ್ಮದಿನೋತ್ಸವದ ಅಂಗವಾಗಿ ಶಿಗ್ಗಾವಿ ಸವಣೂರ ಕ್ಷೇತ್ರದಲ್ಲಿನ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಎಸ್. ಆರ್ ಬೊಮ್ಮಾಯಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಕುಂದಗೋಳದ ಕಮಡೊಳ್ಳಿಯಲ್ಲಿ ಕನ್ನಡದಲ್ಲಿ ಕಲಿತರು ಇಂಗ್ಲೀಷನಲ್ಲಿ ಮಂಚೂಣಿಯಲ್ಲಿದ್ದರು, ಒಮ್ಮೆ ವಿದ್ಯಾರ್ಥಿಯಾದರೆ ಕೊನೆವರೆಗೂ ವಿದ್ಯಾರ್ಥಿಯೇ. ಶಾಲೆಯಲ್ಲಿ ಪಾಠ ಕಲಿತು ನಂತರ ಪರೀಕ್ಷೆ ಇರುತ್ತದೆ. ಜೀವನದಲ್ಲಿ ಪ್ರತಿನಿತ್ಯ ಪರೀಕ್ಷೆ ನಂತರ ಪಾಠ ಇರುತ್ತದೆ. ಇದು ನಿರಂತರ ಪಕ್ರಿಯೆ ಅದಕ್ಕೆ ಸೋಲಿಗೆ ಹೆದರಬಾರದು.
ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಗೆದ್ದಾಗ ದೊಡ್ಡ ಮನಸಿರಬೇಕು. ಸೋತಾಗ ಗಟ್ಟಿ ಮನಸಿರಬೇಕು. ನೀವೆಲ್ಲ ನಿಮ್ಮ ಶಾಲೆ ಕಾಲೇಜು ಹೆಸರು, ಗುರುವಿಗೆ ಹೆಸರು ಕ್ಷೇತ್ರಕ್ಕೆ, ತಂದೆ ತಾಯಿಗೆ ಹೆಸರು ತರಬೇಕು. ವಿದ್ಯಾರ್ಥಿನಿಯರು ಹೆಚ್ಚು ಪ್ರಾಮಾಣಿಕತೆಯಿಂದ ಮಾಡಿ ವಿದ್ಯಾಭ್ಯಾಸ ಮಾಡುತ್ತಾರೆ. ಅವರನ್ನು ನೋಡಿ ಖುಷಿಯಾಗುತ್ತದೆ, ವಿದ್ಯಾರ್ಥಿಗಳಿಗೆ ಗುರಿ ಛಲ ಇರಬೇಕು ಎಂದರು. ಶಿಗ್ಗಾವಿ ಸವಣೂರ ಜ್ಞಾನದ ಆಧ್ಯಾತ್ಮದ ಕೇಂದ್ರ, ಸಂತ ಶಿಶುನಾಳ ಶರೀಫರು ಜಾತ್ಯತೀತವಾಗಿ ಧರ್ಮದ ಚೌಕಟ್ಟು ಮೀರಿ ಆಧ್ಯಾತ್ಮ ಹೇಳಿರುವ ಶರೀಫರು, ಸಂತ ಕನಕದಾಸರು ಆರು ನೂರು ವರ್ಷಗಳ ಹಿಂದೆಯೇ ಮಾಡಿರುವ ವೈಚಾರಿಕ, ಭಕ್ತಿಯ ಕಾಂತಿ ಇವತ್ತಿಗೂ ಅಮರವಾಗಿದೆ ನಮಗೆಲ್ಲ ದಾರೀದೀಪವಾಗಿದೆ ಎಂದರು.ಈ ಸಂಧರ್ಭದಲ್ಲಿ ವಿಶ್ವನಾಥ ಹರವಿ, ಶಿವಪುತ್ರ್ಪ ಕಲಕೋಟಿ, ಮಾರುತಿ ಗೊರವರ, ನೀಲಪ್ಪ ಚವಡಿ, ಮುಖಂಡರುಗಳಾದ ಗವಿಸಿದ್ದಪ್ಪ ದ್ಯಾಮಣ್ಣವರ, ಶಿವಾನಂದ ಮ್ಯಾಗೇರಿ, ಡಿ.ಎಸ್ ಮಾಳಗಿ, ಸುಭಾಷ ಗಡೆಪ್ಪನವರ, ಗಂಗಣ್ಣ ಸಾತಣ್ಣವರ, ಧರೆಪ್ಪಗೌಡ ಪಾಟೀಲ್ ,ತಿಪ್ಪಣ್ಣ ಸಾತಣ್ಣವರ, ಹೊನಕೇರಿ, ನವೀನ ಸವಣೂರ, ದೇವಣ್ಣ ಚಾಕಲಬ್ಬಿ, ಮಾಲತೇಶ ಯಲಿಗಾರ, ಶೋಭಾ ನಿಸ್ಸಿಮಗೌಡ್ರ, ಯಶೋಧಾ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 