ವಿಶ್ವ ಏಡ್ಸ್ ಜಾಗೃತಿ ಜಾಥಾ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ 02: ಯುವಜನತೆ ಸದೃಢವಾಗಿ ಇರಬೇಕಾದರೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ. ತಮ್ಮ ಶರೀರವನ್ನು ಸದೃಢವಾಗಿ ಇದ್ದರೆ ಮಾತ್ರ ಯಾವುದೇ ರೋಗಗಳು ಅಂಟಿಕೊಳ್ಳುವುದಿಲ್ಲ ಎಂದು ಐಎಮ್ಎ,ಅಧ್ಯಕ್ಷ ಡಾ.ಎಚ್,ಜಿ,ದಡ್ಡಿ ಹೇಳಿದರು.
ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ವಿಶ್ವ ಏಡ್ಸ್ ಜಾಗೃತಿ ಜಾಥಾ ಪ್ರಾರಂಭಗೊಂಡು ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ. ನಂತರ ಜಿ,ಜಿ,ಕಾಲೇಜಿನಲ್ಲಿ ನಡೆದ ತಾಲೂಕಾ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ,ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಸುಮಾರು 1981, 86 ರಲ್ಲಿ ಎಚ್,ಐ,ವಿ ರೋಗ ಹರಡಿದ್ದು. ವಿಜಯಪುರ. ಬೆಳಗಾವಿ. ಬಾಗಲಕೋಟ ಜಿಲ್ಲೆಯ ಅತೀ ಹೆಚ್ಚು ರೋಗಿಗಳು ಪತ್ತೆಯಾಗದ್ದು. ಅದರಲ್ಲಿ ಮೊದಲನೇ ಸ್ಥಾನದಲ್ಲಿ ಬಾಗಲಕೋಟ ಜಿಲ್ಲೆಯಾಗಿತ್ತು. ಸುಮಾರು 30 ರಿಂದ 40 ಸಾವಿರಕ್ಕೂ ಅಧಿಕ ಏಡ್ಸ್ ಸೋಂಕಿತರು ಜಿಲ್ಲೆಯಲ್ಲಿ ಇದ್ದು. ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಸೋಂಕಿತರ ಪ್ರಮಾಣ ಇದೆ ಎಂದರು.
ಎಚ್,ಐ,ವಿ ಕುರಿತು ಸಾಕಷ್ಟು ಜಾಗೃತಿಗಳನ್ನು ಯುವಜನತೆಗೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಸಹ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇದು ಲೈಂಗಿಕತೆಯಿಂದ ಅಂಟಿಕೊಳ್ಳುವ ರೋಗವಾಗಿದ್ದು. ಹದಿ ಹರಿಯದ ಯುವಕ, ಯುವತಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೈದ್ಯರ ಕೊರತೆ. ಸಿಬ್ಬಂದಿಗಳ ಕೊರತೆ. ಔಷಧೀಯ ಕೊರತೆಗಳಿಂದ ಸೋಂಕಿತರು ಗುಣಮುಖ ಹೊಂದುತ್ತಿಲ್ಲ. ಇದರ ಬಗ್ಗೆ ಸರಕಾರ ಗಮನವನ್ನು ಹರಿಸುತ್ತಿಲ್ಲ. ಆರೋಗ್ಯ ಸಚಿವರು ಎಚ್,ಐ,ವಿ ಪೀಡಿತರ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ,ವೆಂಕಟರಾಜು, ಡಾ, ಎಮ್,ಎ,ದೇಸಾಯಿ, ಡಾ, ಬಿರಾದರ, ಎ,ಡಿ,ಬಾಗವಾನ, ಡಾ, ಟಿ,ಪಿ, ಗಿರಡ್ಡಿ, ಪಾಟೀಲ, ಕುಂಬಾರ, ಶಾಂತಿನಾಥ, ದ್ರಾಕ್ಷಾಯಿಣಿ ಬಡಿಗೇರ, ಕಡ್ಲಿಮಟ್ಟಿ, ಎಮ್,ಪಿ,ಹೊನವಾಡ, ಆಶಾ ಕಾರ್ಯಕತರ್ೆಯರು, ಆರೋಗ್ಯ ಇಲಾಖೆಯ ಕಾರ್ಯಕತರ್ೆಯರು, ವಿವಿಧ ಶಾಲಾ ವಿದ್ಯಾರ್ಥಿ , ವಿದ್ಯಾರ್ಥಿನಿಯರು, ಸ್ಕೌಟ್, ಎನ್.ಸಿ.ಸಿ, ಹಾಗೂ ವಿವಿಧ ಸಂಘ. ಸಂಸ್ಥೆಯ ಪದಾಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಾಥದಲ್ಲಿ ಭಾಗವಹಿಸಿದರು.