ಚಳಿಗಾಲದ ಹಿನ್ನೆಲೆ: ಬದರಿನಾಥ, ಕೇದಾರನಾಥ ದೇವಾಲಯ ಬಂದ್
ಉತ್ತರಾಖಂಡ, ಅ, 9: ಚಳಿಗಾಲ ಆರಂಭವಾಗಲಿರುವ ಕಾರಣ ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳನ್ನು ಮುಚ್ಚಲಾಗುತ್ತಿದೆ. ಇದೇ 29ರಂದು ಕೇದಾರನಾಥ ದೇವಾಲಯ ಹಾಗೂ ನವೆಂಬರ್ 17ರಿಂದ ಬದ್ರೀನಾಥ ದೇವಾಲಯದ ಬಾಗಿಲುಗಳು ಮುಚ್ಚಲಿವೆ.
ಬದರೀನಾಥ್ ದೇವಾಲಯದ ಮುಖ್ಯ ಅರ್ಚಕರಾದ ಈಶ್ವರಿ ಪ್ರಸಾದ್ ನಂಬೂದರಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಚಳಿಗಾಲದ ಕಾರಣ ನವೆಂಬರ್ 17ರಂದು ಸಂಜೆ 5.13ಕ್ಕೆ ಬದ್ರೀನಾಥ ದೇವಾಲಯವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇದಾರನಾಥ ದೇವಾಲಯವನ್ನು ಇದೇ 29ರಂದು ಬೆಳಗ್ಗೆ 8.30ಕ್ಕೆ ಮುಚ್ಚಲಾಗುತ್ತಿದೆ. ಈ ವರ್ಷ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ದಾಖಲೆ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ. ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು ಬಾಗಿಲು ಮುಚ್ಚುವಾಗ ಅನೇಕ ಧಾರ್ಮಿಕವಿಧಿ ವಿಧಾನಗಳು ನೆರವೇರಲಿವೆ. ಬದರಿನಾಥ ಪ್ರಸಿದ್ಧ ಹಿಂದೂ ದೇವಾಲಯವಾಗಿದ್ದು, ಇಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತಿದೆ. ಕೇದಾರನಾಥ, ಬದರಿನಾಥ , ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುವ ಕಾರಣ ಯಾರು ಹೋಗಲು ಆಗುವುದಿಲ್ಲ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 