ಪದಾರ್ಪಣೆ ಚಾಂಪಿಯನ್ಶಿಪ್ನಲ್ಲೆ ಬೆಳ್ಳಿ ಗೆದ್ದಿರುವುದು ಅದ್ಭುತ ಸಾಧನೆ: ಕಿರಣ್ ರಿಜಿಜು
ನವದೆಹಲಿ, ಅ 13: ಮಂಜು ರಾಣಿ ಅವರು ಪದಾರ್ಪಣೆ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲೆ ಬೆಳ್ಳಿ ಪದಕ ಗೆದ್ದಿರುವುದು ಅದ್ಭುತ ಸಾಧನೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಬಾಕ್ಸರ್ ಅನ್ನು ಕೊಂಡಾಡಿದ್ದಾರೆ.
ಇಂದು ರಷ್ಯಾದಲ್ಲಿ ನಡೆದ 48 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಮಂಜು ರಾಣಿ ಅವರು, ಸ್ಥಳೀಯ ಬಾಕ್ಸರ್ ಎಕಟೆರಿನ್ ಪಾಲ್ಟ್ಸವಾ ವಿರುದ್ಧ 1-4 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
"ಪದಾರ್ಪಣೆ ವಿಶ್ವ ಚಾಂಪಿಯನ್ಶಿಪ್ನಲ್ಲೆ ಬೆಳ್ಳಿ ಪದಕ ಗೆದ್ದಿರುವುದು ಅದ್ಭುತ ಸಾಧನೆ. ಅಂಭಿನಂದನೆಗಳು ಮಂಜು ರಾಣಿ" ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.
ಶನಿವಾರ ಮಂಜು ರಾಣಿ ಸೆಮಿಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್ನ ಚಥುಮತ್ ರಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆ ಮೂಲಕ, ಫೈನಲ್ ತಲುಪಿದ್ದ ಭಾರತದ ಏಕೈಕ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು.
ಪ್ರಸ್ತುತ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಚೊಚ್ಚಲ ಫೈನಲ್ ಪ್ರವೇಶ ಮಾಡಿದ ಭಾರತ ಮೊದಲ ಬಾಕ್ಸರ್ ಎಂಬ ಸಾಧನೆಗೆ 18ರ ಪ್ರಾಯದ ಮಂಜು ರಾಣಿ ಭಾಜನರಾಗಿದ್ದರು. ಆದರೆ, ಅವರ ಕನಸು ನನಸಾಗಲಿಲ್ಲ.
ಚಾಂಪಿಯನ್ಶಿಪ್ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಅವರು ಸೆಮಿಫೈನಲ್ ಪಂದ್ಯದಲ್ಲಿ ಬುಸೆನಾಜ್ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸಿ ಕಂಚಿಗೆ ಸೀಮಿತರಾದರು.
ಜತೆಗೆ, ಜಮುನಾ ರಾವ್ ಹಾಗೂ ಲೊವ್ಲಿನಾ ಅವರು ಕೂಡ ಕ್ರಮವಾಗಿ 54 ಮತ್ತು 69 ಕೆ.ಜಿ ವಿಭಾಗದ ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 