ವಾರಾಂತ್ಯ ಕರ್ಫ್ಯೂ: ಮುಧೋಳದಲ್ಲಿ ಜನ, ವಾಹನ ಸಂಚಾರ ವಿರಳ
ಮುಧೋಳ: ಕೋವಿಡ್ ನಿಯಂತ್ರಣಕ್ಕೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ ಕಾರಣ ಮಾರುಕಟ್ಟೆ ಪ್ರದೇಶ ಸಂಪೂರ್ಣ ಬಂದ್ ಆಗಿದೆ. ನಗರ ಬಸ್ ನಿಲ್ದಾಣ, ನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು ಶಿವಾಜಿ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಗಡದನ್ನವರ ಸರ್ಕಲ್,ರನ್ನ ಸರ್ಕಲ್ ಡಾ.ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್, ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.ಅನಗತ್ಯವಾಗಿ ಸಂಚರಿಸುತ್ತಿರುವವರನ್ನು ತಡೆದು ಪೊಲೀಸರು ವಿಚಾರಣೆ ನಡೆಸಿ ಎಚ್ಚರಿಕೆ ಕೊಟ್ಟು ಕಳಿಸುತ್ತಿದ್ದರು.
ರಾಜ್ಯದಲ್ಲಿ ಕರೋನಾ ಮೂರನೇ ಅಲೆ ರೂಪಾಂತತರ ಓಮಿಕ್ರೋನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಯಲ್ಲಿ ಶುಕ್ರವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಿಗ್ಗೆ 5ಗಂಟೆಯವರಿಗೆ ವಾರಾಂತ್ಯ ಕಪ್ರ್ಯೂ ಜಾರಿ. ಜಿಲ್ಲಾಧಿಕಾರಿ ಆದೇಶದಂತೆ ತಾಲೂಕು ಆಡಳಿತವತಿಯಿಂದ ತಾಲೂಕಿನಲ್ಲಿ ಕಿರಾಣಿ, ಹಣ್ಣಿನ ಅಂಗಡಿಗಳು, ತರಕಾರಿಗಳು, ಮೆಡಿಕಲ್ ಸ್ಟೋರ್ಸ್ ತೆಗದಿದ್ದು, ದೊಡ್ಡ ದೊಡ್ಡ ಹೊಟಲ್ಗಳಲ್ಲಿ ಪಾರ್ಸಲ್ ವ್ಯವಸ್ಥೆಯನ್ನು ನಗರಸಭೆಯಿಂದ ಕಲ್ಪಿಸಲಾಗಿತ್ತು.
ಸಾರ್ವಜನಿಕರ ನಿಯಂತ್ರಣಕ್ಕಾಗಿ ವಿವಿಧ ಅಡ್ಡ ರಸ್ತೆಗಳ ಮಾರ್ಗಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿನ್ನು ನೇಮಿಸಿದ್ದು, ನಾಗರೀಕರ ಓಡಾಟವನ್ನು ನಿಷೇಧಿಸಲಾಗಿದೆ, ತೀರಾ ಅವಶ್ಯಕತೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಸರ್ಕಾರದ ಆದೇಶವನ್ನು ಪಾಲಿಸುವಂತೆ ನಗರಸಭೆಯಿಂದ ಕಸ ವಿಲೇವಾರಿ ವಾಹನದಲ್ಲಿ ಪ್ರಚಾರ ನಡೆಸಿದ್ದು, ವಾರಾಂತ್ಯ ಕಪ್ರ್ಯೂಗೆ ಜನರು ಸ್ಥಬ್ದವಾಗಿದ್ದಾರೆ.ನಗರದ ಅವಶ್ಯಕ ವಸ್ತುಗಳ ಖರೀದಿ ಕೆಂದ್ರಗಳನ್ನು ಬಿಟ್ಟು ಉಳಿದ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಲಾಗಿದೆ.
ಸಾರಿಗೆಯ ಎಲ್ಲ ಬಸ್ಸುಗಳು ಕೆಲವು ಬಸ್ ಬಿಟ್ಟು ಉಳಿದವು ಘಟಕ ಹಾಗೂ ನಿಲ್ದಾಣದಲ್ಲೇ ಠಿಕಾಣೆ ಹೂಡಿದವು. ಕೆಲವರು ಬೈಕ್, ಆಟೊ, ಕಾರುಗಳಲ್ಲಿ ಸಂಚರಿಸಿದರು.ಇನ್ನೂ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಟ್ರಕ್ ಗಳು ಎಂದಿನಂತೆ ಕಾರ್ಯ ಮಾಡಿಸವು. ವೃತ್ತಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸೂಪರ್ ಮಾರ್ಕೆಟ್ ನಲ್ಲಿ ಕೆಲವು ವ್ಯಾಪಾರಿಗಳು ಎಂದಿನಂತೆಯೇ ಶನಿವಾರ ನಸುಕಿನಲ್ಲಿ ಕೂಡ ತಮ್ಮ ಹಣ್ಣು, ತರಕಾರಿ ವ್ಯಾಪಾರ ಆರಂಭಿಸಿದರು. ಇದರಿಂದ ಬೆಳಿಗ್ಗೆ 8ರವರೆಗೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. 9ರ ನಂತರ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಿದರು.