ಮುಂಡರಗಿ

ನರೇಗಾ ಕಾಮಗಾರಿಯ ಕೃಷಿ ಕಾರ್ಮಿಕರಲ್ಲಿ ಮತದಾನ ಜಾಗೃತಿ ಜಾಥಾ

ನರೇಗಾ ಕಾಮಗಾರಿಯ ಕೃಷಿ ಕಾರ್ಮಿಕರಲ್ಲಿ  ಮತದಾನ ಜಾಗೃತಿ ಜಾಥಾ

ಲೋಕದರ್ಶನ ವರದಿ 

ಮುಂಡರಗಿ 21: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಕಾಮಗಾರಿಗಳು ಸಮರ​‍್ಕವಾಗಿ ಅನುಷ್ಠಾನವಾದರೆ, ಅದರ ಯಶಸ್ಸು ಗ್ರಾಮೀಣ ಭಾಗದ ಜನರಿಗೆ ಹಾಗೂ ರೈತರಿಗೆ ಸಲ್ಲುತ್ತದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ ಹೇಳಿದರು.   

   ತಾಲೂಕಿನ ಮೇವುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಕಲಾಸಪೂರ ಗ್ರಾಮದಲ್ಲಿ ಜಲ ಸಂಜೀವಿನಿ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದ ಅವರು, ಈ ತಾಲೂಕಿನಲ್ಲಿರುವ ಹೆಚ್ಚೆಚ್ಚು ಮಹಿಳೆಯರು ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಬೇಕು. ಆ ಬಗ್ಗೆ ಸ್ವಯಂ ಪ್ರೇರಣೆಯಿಂದ ಜಾಗೃತಿಯನ್ನು ಮೂಡಿಸಲು ನೀವು ಮುಂದಾಗಬೇಕು.  

    ಕೂಲಿ ದರವನ್ನು ಈಗ 316 ರೂ.ಗಳಿಗೆ ಏರಿಸಲಾಗಿದೆ. ಇದು ಕಾರ್ಮಿಕರಿಗೆ ಖುಷಿಯ ಸಂಗತಿಯ ಜೊತೆಗೆ ನರೇಗಾ ಕಾಮಗಾರಿಗಳಲ್ಲಿ ಹೆಚ್ಚೆಚ್ಚು ತೊಡಗಲು ಪ್ರೇರಣೆ. ಬೇಸಿಗೆಯಲ್ಲಿ ನರೇಗಾ ಯೋಜನೆಯಿಂದ ದುಡಿದ ಹಣವನ್ನು ಮಳೆಗಾಲಕ್ಕೆ ಗ್ರಾಮೀಣ ಭಾಗದ ಜನರು ಹಾಗೂ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿಯ ಚಟುವಟಿಕೆ ಭಾಗವಾಗಿ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮೇ10ರಂದು ನೀವು ಚಲಾಯಿಸುವ ಒಂದು ಮತ ನಿಮ್ಮ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ  ಚಲಾಯಿಸುವ ಒಂದು ಮತ ನಮ್ಮ ಕರ್ತವ್ಯ. ಯಾವುದೇ ಕಾರಣಕ್ಕೂ ಮತದಾನ ಮಾಡದೇ ಇರಬೇಡಿ ಎಂದು ಹೇಳಿದರು.   

     ಗುರುವಾರ ಮಳೆಯಾದ ಕಾರಣ ನರೇಗಾ ಕಾಮಗಾರಿ ನಡೆದ ಸ್ಥಳಕ್ಕೆ ತಲುಪುವ ರಸ್ತೆ ಕೆಸರುಮಯವಾಗಿತ್ತು. ಹಾಗಾಗಿ ಕಾಮಗಾರಿ ಸ್ಥಳಕ್ಕೆ ಟ್ರ್ಯಕ್ಟರ್ ಏರಿ ಬಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ಸೆಳೆದರು. ಕಾಮಗಾರಿಯ ಬಿಡುವಿನ ವೇಳೆ ಸೋಬಾನ್ ಜನಪದ ಪದಗಳನ್ನು ಹಾಡುವ ಮೂಲಕ ನರೇಗಾ ಕೂಲಿಕಾರ ಮಹಿಳೆಯರು ದಣಿವಾರಿಸಿಕೊಂಡರು.   

    ಈ ವೇಳೆ ಪಿಡಿಓ ಸಂತೋಷ ಹೂಗಾರ, ಐಇಸಿ ಸಿದ್ದು ಸತ್ಯಣ್ಣವರ, ಬಿ.ಎಫ್‌.ಟಿ ಪರ​‍್ಪ ಶಿರೂರ, ತಾಪಂ ಸಿಬ್ಬಂದಿ ಹಾಗೂ ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.  


ಸುದ್ದಿ ಓದಿ