ಕುಕನೂರ್

ಅಂಗವಿಕಲರಿಗೆ ವಾಹನ ವಿತರಣೆ

ಅಂಗವಿಕಲರಿಗೆ ವಾಹನ ವಿತರಣೆ

ಲೋಕದರ್ಶನ ವರದಿ

ಕುಕನೂರು 28: ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸಚಿವರ ಕಚೇರಿಯಲ್ಲಿ ಸೋಮವಾರ ಅಂಗವಿಕಲರಿಗೆ ಹಿರಿಯ ನಾಗರಿಕರ ಸಬಲೀಕರಣ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್ ತ್ರಿಚಕ್ರ ವಾಹನ ವಿತರಿಸಿದರು.   

ಕುಕನೂರು ಅಂಗವಿಕಲರ ಕಲ್ಯಾಣಕ್ಕೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಪಡೆದು ಆಥರ್ಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಗೊಳ್ಳಬೇಕು ಎಂದು  ಹಿರಿಯ ನಾಗರಿಕರ ಸಬಲೀಕರಣ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್  ಸಲಹೆ ನೀಡಿದರು. 

ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸಚಿವರ ಕಚೇರಿಯಲ್ಲಿ ಸೋಮವಾರ  ಅಂಗವಿಕಲರಿಗೆ ವಾಹನ ವಿತರಿಸಿ ಅವರು ಮಾತನಾಡಿದರು. ಇತರರಂತೆ ಸುಂದರ ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದಕ್ಕೆ ಸಕರ್ಾರ ನೆರವು ನೀಡುತ್ತಿದೆ. ಹಾಗೆಯೇ ಸಂಘ ಸಂಸ್ಥೆಗಳು ಕೂಡ ಪ್ರೋತ್ಸಾಹಿಸುತ್ತಿವೆ. ಮೀಸಲಾತಿ ಕಲ್ಪಿಸಿಕೊಡುವ ಮೂಲಕ ಸಕರ್ಾರ ಬೆಂಬಲಿಸುತ್ತಿದೆ. ಅದನ್ನು ಉಪಯೋಗಿಸಿಕೊಂಡು ಮುಖ್ಯವಾಹಿನಿಯಲ್ಲಿ ಅಗ್ರ ಸ್ಥಾನದಲ್ಲಿರಬೇಕು ಎಂದರು.  


ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಮಾರುತಿ ಗಾವರಾಳ, ಬಸವನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ಈರಪ್ಪ ಕರೆಕುರಿ ಇದ್ದರು 

ಸುದ್ದಿ ಓದಿ