ಮುಧೋಳ

ನೀರನ್ನುಮಿತವಾಗಿ ಬಳಕೆ ಮಾಡುವುದರಿಂದ ಸವಳು-ಜವಳು ಭೂಮಿ ತಡೆಯಬಹುದು: ಕಾರಜೋಳ

ನೀರನ್ನುಮಿತವಾಗಿ ಬಳಕೆ ಮಾಡುವುದರಿಂದ ಸವಳು-ಜವಳು ಭೂಮಿ ತಡೆಯಬಹುದು: ಕಾರಜೋಳ

 ಮುಧೋಳ: ಕೃಷಿ ತಂತ್ರಜ್ಞರನ್ನು ಹಾಗೂ ಕೃಷಿ ವಿಜ್ಞಾನಿಗಳ ಸಹಕಾರ ಹಾಗೂ ಭೂಮಿಗೆ ಅವಶ್ಯಕತೆಯಿದ್ದಷ್ಟು ಮಾತ್ರ ನೀರನ್ನು ಬಳಕೆ ಮಾಡುವದರಿಂದ ಸವಳು-ಜವಳು ಭೂಮಿಯನ್ನು ತಡೆಗಟ್ಟಬಹುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು 

     ಶನಿವಾರ ಕವಿಚಕ್ರವರ್ತಿ ರನ್ನ ಸಭಾಭವನದಲ್ಲಿ  ಜಲ ಸಂಪನ್ಮೂಲ ಇಲಾಖೆ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ, ಧಾರವಾಡ ಕರ್ನಾಟಕ ನೀರಾವರಿ ನಿಗಮ ನಿಯಮಿತ , ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಬಾಗಲಕೋಟೆ , ಕೃಷಿ , ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗಳು , ಬಾಗಲಕೋಟೆ ಹಾಗೂ ಘಟಪ್ರಭಾ ನೀರು ಬಳಕೆದಾರರ ಸಹಕಾರಿ ಸಂಘಗಳ ಯೋಜನಾ ಮಟ್ಟದ ಮಹಾಮಂಡಳ , ಹಿಡಕಲ್ ಡ್ಯಾಂ ಇದರ ಸಹಯೋಗದಲ್ಲಿ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಸವಳು  ಜವಳು ಸಮಸ್ಯೆಗಳು ಹಾಗೂ ಪರಿಹಾರಗಳು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

  ರಾಜ್ಯದಲ್ಲಿ ಈಗ ಸಾಕಷ್ಟು ನೀರಾವರಿಯಾಗಿದೆ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ನಾವು ಅಂದಕೊಂಡರೂ ಸಹ ಇಲ್ಲಿಯವರೆಗೆ ನಮ್ಮ ರಾಜ್ಯದಲ್ಲಿ ಶೇ 35ರಷ್ಟು ಮಾತ್ರ ನೀರಾವರಿಯಾಗಿದೆ.ಇನ್ನು ಶೇ.100 ಆದರೆ ಈ ರಾಜ್ಯ ಯಾವ ರೀತಿಯಲ್ಲಿ ಅಭಿವೃದ್ಧಿ ಸಾಧಿಸಬಹುದು ಯೋಚಿಸಿ  ಈ ನಿಟ್ಟಿನಲ್ಲಿ ಸರ್ಕಾರ ನಿರಂತರ ಪ್ರಯತ್ನದಲ್ಲಿದ್ದು ಶೇ.100ರಷ್ಟು ನೀರಾವರಿಯಾಗಲು  235ಸಾವಿರಕೋಟಿ ಹಣ ಬೇಕು ಇಷ್ಟು ಹಣ ಖರ್ಚು ಮಾಡಿದರೆ ರಾಜ್ಯ 22ಲಕ್ಷ ಎಕರೆ ಜಮೀನು ನೀರಾವರಿಯಾಗುತ್ತದೆ. ಆದರೆ ರೈತರು ಹೆಚ್ಚು ನೀರು ಬಳಕೆ ಮಾಡುವದರಿಂದ ಜಮೀನು ಸವಳಾಗುತ್ತಿದೆ. ಭೂಮಿಯೂ ಸಹ ಶರೀರವಿದ್ದಂತೆ ಶರೀರಕ್ಕೆ ಮಿತ ಆಹಾರ ನೀಡಿದರೆ ಆರೋಗ್ಯವಾಗಿಡುತ್ತೇವೆಯೋ ಅದೇ ರೀತಿ ಭೂಮಿಗೂ ಸಹ ಮಿತ ನೀರು ಹಾಯಿಸಬೇಕು ಈ ನಿಟ್ಟಿನಲ್ಲಿ ನಾವು ಯಾವೂದೇ ಬೆಳೆ ಬೆಳೆಯುವ ಮುಣ್ಣು ಪರೀಕ್ಷೆ ಮಾಡಬೇಕು ಉತ್ತಮ ಬೆಳೆ ಪದ್ಧತಿ ಅನುಸರಿಸಬೇಕು ಜೊತೆಗೆ ಸವಳು ಜವಳು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಜೊತೆಗೆ ಮೀನು ಸಾಕಾಣಿಕೆಯಿಂದ ಆದಾಯವನ್ನು ಇಮ್ಮಡಿ ಮಾಡಬಹುದು ಈ ನಿಟ್ಟಿನಲ್ಲಿ ರೈತರು ಮುಂದುವರೆಯಬೇಕು ಸವಳು ಜವಳು ತಡೆಗಟ್ಟಲು ಕೆಲವು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ ಇದು ಯಶ್ವಿಯಾದರೆ ರಾಜ್ಯದ ಎಲ್ಲ ಕಡೆ ಈ ನಿಯಮಪಾಲಿಸಲಾಗುತ್ತದೆ ಎಂದು ಹೇಳಿದರು 

   ಧಾರವಾಡದ ವಾಲ್ಮಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ, ಮಾತನಾಡಿ ಮಣ್ಣು ನೀರು ಸಂರಕ್ಷಣೆ ಮಾಡುವದರಿಂದ ಅವುಗಳನ್ನು ನಮ್ಮನ್ನು ರಕ್ಷಣೆ ಮಾಡುತ್ತವೆ ಇದು ನಮ್ಮ ಆದ್ಯ ಕರ್ತವ್ಯವಾಗಬೇಕು ಅತಿಯಾದ ನೀರು ಬಳಕೆಯಿಂದ ಭೂಮಿಯು ಸವಳು-ಜವಳು ಭೂಮಿಯಾಗಿ ಮಾರ​‍್ಾಡುತ್ತದೆ,ಸರ್ಕಾರ ಈ ಸವಳು ಜವಳು ನಿರ್ಮೂಲನೆಗಾಗಿ ಹೊಸ ಯೋಜನೆ ಜಾರಿಗೆ ತಂದಿದ್ದು ಪ್ರಾಯೋಗಿಕವಾಗಿ ಮುಧೋಳ ತಾಲ್ಲೂಕಿನ ಯಡಹಳ್ಳಿ,ಇಂಗಳಗಿ,ಜೀರಗಾಳದಲ್ಲಿ ಮಾಡಲಾಗುತ್ತಿದ್ದು ಇದು ಯಶಸ್ವಿಯಾದರೆ ಮುಂದೆ 6900 ಹೆಕ್ಟರ್ ಭೂಮಿಗೆ ಅಳವಡಿಸಿಲು ನಿರ್ಧರಿಸಲಾಗಿದೆ ಎಂದು ಹೇಳಿಒದದರು. 

   ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ . ಕೆ . ಎಮ್ , ಇಂದಿರೇಶ ಕಾಡಾ, ಮಲಪಭಾ ಮತ್ತು ಘಟಪ್ರಭಾ ಯೋಜನೆಗಳು ಆಡಳಿತಾಧಿಕಾರಿ ಶಶಿಧರ ಕುರೇರ, ಕನೀನಿನಿ, ನೀರಾವರಿ ವಲಯ, ಬೆಳಗಾವಿ ಮುಖ್ಯ ಇಂಜೀನೀಯರ್ ಇಂ.ಕೆ.ರಾಜೇಶ, ಜಂಟಿ ಕೃಷಿ ನಿರ್ದೇಶಕ ಡಾ .ಚೇತನಾ ಪಾಟೀಲ, ಸಂಶೋಧನಾ ನಿರ್ದೇಶಕ ಡಾ.ಪಿ.ಎಲ್‌.ಪಾಟೀಲ, ಡಾ.ಎಚ್‌.ಪಿ.ಮಹೇಶ್ವರ​‍್ಪ ತಹಸೀಲ್ದಾರ ಸಂಗಮೇಶ ಬಾಡಗಿ, ಘಟಪ್ರಭಾ ನೀ.ಬ.ಸ.ಸಂಘಗಳ ಯೋಜನಾ ಮಟ್ಟದ ಮಹಾಮಂಡಳ ಹಿಡಕಲ್ ಡ್ಯಾಂ ಅಶೋಕ ಅಧ್ಯಕ್ಷ ಅಶೋಕ ಖಂಡ್ರಟ್ಟಿ , ಲಕ್ಷ್ಮಣ ಚಿನ್ನಣ್ಣವರ, ಡಾ . ಎಸ್ . ಶಶಿಕುಮಾರ ,ಬೂದೇಶ್ವರ ಬಳ್ಳಾಪೂರ,ಮಹೇಶ ದಂಡನ್ನವರ ಇದ್ದರು. 


ಸುದ್ದಿ ಓದಿ