ಮುಧೋಳ

ಮುಧೋಳ ತಾಲೂಕಿನ ಬೆಳಗಲಿಯ ಯುವಕರಿಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳಾಗಿ ಆಯ್ಕೆ

ಮುಧೋಳ ತಾಲೂಕಿನ ಬೆಳಗಲಿಯ ಯುವಕರಿಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳಾಗಿ ಆಯ್ಕೆ

ಮಹಾಲಿಂಗಪುರ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿಯ ಯುವಕರಿಬ್ಬರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್ ಗಳಾಗಿ ಆಯ್ಕೆಗೊಂಡು ಪಟ್ಟಣದ ಕೀರ್ತಿಯನ್ನು ಹೆಚ್ಚಿಸಿರುವುದಕ್ಕೆ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಅಡಿವೆಪ್ಪ. ಶ್ರೀಮಂತ. ಸಿದ್ದಾಪುರ 40ನೇ ಹಾಗೂ ಬಸವರಾಜ. ದ್ಯಾವಪ್ಪ. ಕ್ವಾನ್ಯಾಗೋಳ 213 ನೇ ಸ್ಥಾನ ಪಡೆದು ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್‌ಗಳಾಗಿ ಆಯ್ಕೆಗೊಂಡಿರುವ ವ್ಯಕ್ತಿಗಳಾಗಿದ್ದಾರೆ. 

ಅಡಿವೆಪ್ಪ. ಶ್ರೀಮಂತ. ಸಿದ್ದಾಪುರ : ಇವರ ಪರಿವಾರ ಸ್ಥಿತಿವಂತ ಕೃಷಿಕರು. ಈಗಾಗಲೇ ಕೆಎಸ್‌. ಆರ್‌. ಪಿಯಲ್ಲಿ ಎಸ್‌.ಆಯ್ ಆಗಿ ಒಂದು ವರ್ಷದ ಮಟ್ಟಿಗೆ ಕಾರ್ಯ ನಿರ್ವಹಿಸುತ್ತ, ಕಠಿಣ ಪರಿಶ್ರಮದಿಂದ ಹೆಚ್ಚಿನ ಅಧ್ಯಯನ ಮಾಡಿ ಪೋಲಿಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗುವ ಕನಸನ್ನು ನನಸು ಮಾಡಿಕೊಂಡು ಈ ಭಾಗದಲ್ಲಿ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿಯಾಗಿದ್ದಾರೆ. 

ಬಸವರಾಜ. ದ್ಯಾವಪ್ಪ. ಕ್ವಾನ್ಯಾಗೋಳ : ಇವರು ಸಣ್ಣ ಕೃಷಿಕರು ಮತ್ತು ದೊಡ್ಡ ಪರಿವಾರ, ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಓದನ್ನು ಮುಂದುವರಿಸಿಕೊಂಡು ಬಂದವರು. ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಾ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗುವ ಕನಸು ಹೊತ್ತು, ಹೆಚ್ಚಿನ ವ್ಯಾಸಂಗ ಮಾಡಿ ರಾಜ್ಯಕ್ಕೆ 213ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪಿಎಸ್‌ಐ  ಹುದ್ದೆಗೆ ಆಯ್ಕೆಯಾಗಿದ್ದಾರೆ. 

ಇವರು 2017ರಲ್ಲಿ ಇದೇ ಹುದ್ದೆಗೆ ಪ್ರಯತ್ನಿಸಿ, ಛಲ ಬಿಡದೆ ಸತತ ನಾಲ್ಕು ವರ್ಷಗಳ ಪರಿಶ್ರಮದ ಅಧ್ಯಯನದ ಫಲವಾಗಿ ಮತ್ತು ಅಣ್ಣನ ಆದಿಯಾಗಿ ಪರಿವಾರದ ಎಲ್ಲ ಸದಸ್ಯರ ಸಹಕಾರದಿಂದ ಪಿಎಸ್‌ಐ  ಹುದ್ದೆಗೆ ಆಯ್ಕೆಗೊಂಡಿದ್ದೇನೆ ಎಂದು ಅವರ ಸಹಕಾರವನ್ನು ಬಸವರಾಜ ನೆನೆಯುತ್ತಾರೆ. 

ನನಗೆ ಇದಕ್ಕಿಂತಲೂ ಮುಂಚಿತವಾಗಿ ಮಹಾಲಿಂಗಪುರದ ಎಸ್‌.ಸಿಪಿ ಸಂಸ್ಥೆಯ ಕೆಎಲ್‌ಇ  ಕಾಲೇಜಲ್ಲಿ ಪದವಿ ಮುಗಿಸಿದ್ದೇನೆ. ಪಿಯುಸಿ ವ್ಯಾಸಂಗ ಮಾಡುವಾಗ ಉಪನ್ಯಾಸಕರ ಸಲಹೆಯಂತೆ ಪಿಎಸ್‌ಐ  ಹುದ್ದೆಗೆ ಸಂಬಂಧಿಸಿದ ಪಠ್ಯಗಳನ್ನು ಅಭ್ಯಸಿಸಲು ಆರಂಭಿಸಿದೆ. ಈ ಕಾರಣದಿಂದ ಈ ಹುದ್ದೆ ಪಡೆಯಲು ನನಗೆ ಅನುಕೂಲಕರವೂ ಆಗಿದೆ ಎಂದು ನೂತನವಾಗಿ ಆಯ್ಕೆಗೊಂಡ ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ತಮ್ಮ ಅಂದಿನ ದಿನಗಳ ಸಲಹೆಗಳನ್ನು ನೆನೆಯುತ್ತಾರೆ. 

ಇವರ ಆಯ್ಕೆಗೆ ಪಟ್ಟಣದ ಹಿರಿಯರಾದ ಧರೆಪ್ಪ ಸಾಂಗ್ಲಿಕರ್, ಪಂಡಿತ ಪೂಜಾರ, ಸಿದ್ದುಗೌಡ ಪಾಟೀಲ್, ಸಿದ್ದು ಕೊಣ್ಣೂರ, ಚಿಕ್ಕಪ್ಪ ನಾಯಕ್, ಸಂಗನಗೌಡ ಬಿ- ಪಾಟೀಲ್, ಈರ​‍್ಪ ಕಿತ್ತೂರ, ರಂಗಪ್ಪ ಒಂಟಗೋಡಿ, ಕಾಡಯ್ಯ ಗಣಾಚಾರಿ, ಮಾಜಿ ಯೋಧ ಸಂಗಪ್ಪ ಹಿಪ್ಪಲಕರ್, ಶಿಕ್ಷಕರಾದ ರಾಘವೇಂದ್ರ ನೀಲನ್ನವರ, ಪರಮಾನಂದ ಹಾರೂಗೇರಿ, ಮಹಾದೇವ ಕುಲಗೂಡ, ಕೆ.ಬಿ. ಕುಂಬಾಳೆ ಇನ್ನು ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ. 

ಯಾವುದೇ ಲಾಬಿ ಮಾಡದೇ ತಮ್ಮ ಸ್ವಂತ ಅಭ್ಯಾಸದ ಬಲದಿಂದ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನನ್ನ ಸಹೋದರ ಬಸವರಾಜ ಕ್ವಾನ್ಯಾಗೋಳ ಮತ್ತು ಪಟ್ಟಣದ ಅಡಿವೆಪ್ಪ ಸಿದ್ದಾಪುರ ಇಬ್ಬರೂ ಪಾರದರ್ಶಕವಾಗಿ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ. 

-ಮಲ್ಲು ಕ್ವಾನ್ಯಾಗೋಳ ರನ್ನ ಬೆಳಗಲಿ. 


ಸುದ್ದಿ ಓದಿ