ಅಂತರರಾಷ್ಟ್ರೀಯ

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ

ಲಾಸ್ ಏಂಜಲೀಸ್: ಜುಲೈ 25: ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ.

ಸ್ಯಾನ್ ಪೆಡ್ರೊದ ದೊಡ್ಡ ಉದ್ಯಾನವನದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ ಎಂದು ಎನ್‌ಬಿಸಿ ಲಾಸ್ ಏಂಜಲೀಸ್ ವರದಿ ಮಾಡಿದೆ. ಕಾರ್ಯಕ್ರಮದ ವೇಳೆ ಕಾರ್ ಶೋ, ಬೇಸ್ ಬಾಲ್ ಆಟ ಮತ್ತಿತರ ಚಟುವಟಿಕೆಗಳಿಗಾಗಿ ನೂರಾರು ಜನರು ಈ ಮೈದಾನದಲ್ಲಿ ಜಮಾಯಿಸಿದ್ದರು. ಮೃತರ ಪೈಕಿ ಒಬ್ಬಾತ ಬೇಸ್ ಬಾಲ್ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆಕ್ ಪಾರ್ಕ್‌ನಲ್ಲಿ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಕ್ಯಾಪ್ಟನ್ ಕೆಲ್ಲಿ ಮುನಿಜ್ ಹೇಳಿದ್ದಾರೆಂದು ಸಿಎನ್‌ಎನ್ ಉಲ್ಲೇಖಿಸಿದೆ. ಘಟನೆ ಬಳಿಕ ಮೈದಾನವನ್ನು ಖಾಲಿ ಮಾಡಲಾಗುತ್ತಿದ್ದು, ಉದ್ಯಾನದಲ್ಲಿ ಅನೌಪಚಾರಿಕವಾಗಿ ಕಾರ್ ಶೋ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಸುದ್ದಿ ಓದಿ