ಅಂತರರಾಷ್ಟ್ರೀಯ

ಸ್ವೀಡನ್, ಫಿನ್‌ಲ್ಯಾಂಡ್‌ಗೆ ಬೆದರಿಕೆ ಹಾಕಿದ ಟರ್ಕಿ!

ಸ್ವೀಡನ್, ಫಿನ್‌ಲ್ಯಾಂಡ್‌ಗೆ ಬೆದರಿಕೆ ಹಾಕಿದ ಟರ್ಕಿ!

ಅಂಕಾರಾ: ಜುಲೈ 19: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತೊಮ್ಮೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ಗೆ ಉತ್ತರ ಅಟ್ಲಾಂಟಿಕ್ ಫೆಡರೇಶನ್ ಆರ್ಗನೈಸೇಶನ್ (ನ್ಯಾಟೋ) ಗೆ ಸೇರುವ ಸಂಬಂಧ ಬೆದರಿಕೆ ಹಾಕಿದ್ದಾರೆ.

ಫಿನ್‌ಲ್ಯಾಂಡ್ ಹಾಗೂ ಸ್ವೀಡನ್ ಎರಡೂ ರಾಷ್ಟ್ರಗಳು ಟರ್ಕಿಯ ಮಿಲಿಟರಿ ಮೈತ್ರಿಯ ಷರತ್ತುಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ಹಾಗೂ ನಮ್ಮ ಷರತ್ತುಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನ್ಯಾಟೋಗೆ ಸೇರಬೇಕೆನ್ನುವ ಆ ರಾಷ್ಟ್ರಗಳ ಪ್ರಕ್ರಿಯೆಗಳನ್ನು ತಡೆಯುತ್ತೇವೆ ಎಂದು ಟರ್ಕಿ ಅಧ್ಯಕ್ಷ ಎರ್ಡೊಗನ್ ಹೇಳಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದ್ದ ಟರ್ಕಿ, ಬಳಿಕ ನಿಷೇಧಿತ ಕುರ್ದಿಶ್ ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ರಷ್ಯಾ ಮತ್ತು ಇರಾನ್‌ನೊಂದಿಗಿನ ಮೂರು ಹಂತದ ಶೃಂಗಸಭೆಯ ಮುನ್ನಾದಿನದಂದು ಸೋಮವಾರ ಮಾತನಾಡಿದ ಟರ್ಕಿಶ್ ಅಧ್ಯಕ್ಷರು, “ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನಮ್ಮ ಷರತ್ತುಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನಾವು ಅವರ ಇಚ್ಛೆಗೆ ತಡೆಯೊಡ್ಡುತ್ತೇವೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಈ ತಿಂಗಳ ಆರಂಭದಲ್ಲಿ, ಟರ್ಕಿಯೊಂದಿಗಿನ ಒಪ್ಪಂದದ ಬಳಿಕ ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ಗೆ ನ್ಯಾಟೋ ಸದಸ್ಯತ್ವ ನೀಡುವುದನ್ನು ತಡೆಹಿಡಿದಿತ್ತು.

ಸುದ್ದಿ ಓದಿ