ನಿವೃತ್ತ ಡಾ. ಸರ್ವಮಂಗಳಾ ಎಂ. ಕುದರಿ ಅವರಿಗೆ ಸನ್ಮಾನ

ನಿವೃತ್ತ ಡಾ. ಸರ್ವಮಂಗಳಾ ಎಂ. ಕುದರಿ ಅವರಿಗೆ ಸನ್ಮಾನ Tribute to retired Dr. Sarvamangala M. Kudari

ಲೋಕದರ್ಶನ ವರದಿ 

ಹುಬ್ಬಳ್ಳಿ 03 :  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಕಳೆದ 30ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ,   ಆತ್ಮೀಯರು, ಮಾರ್ಗದರ್ಶಕರು, ಹಿತೈಸಿಗಳಾದ ಡಾ. ಸರ್ವಮಂಗಳಾ ಎಂ. ಕುದರಿ ಅವರು ಸೇವಾ ನಿವೃತ್ತರಾದ ನಿಮಿತ್ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಕಾಲೇಜಿನಲ್ಲಿ ಭೇಟಿ ಮಾಡಿ,  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವದಿಂದ  ಆತ್ಮೀಯವಾಗಿ ಸನ್ಮಾನಿಸಿದರು. ಹುತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.  

ನಿವೃತ ಜೀವನ ಸುಖಕರವಾಗಿ ಇರಲೆಂದು  ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಕತೃ ಜಗದ್ಗುರು ಗುರುಸಿದ್ಧೇಶ್ವರ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ, ಶಿವಬಸಪ್ಪ ಸೊಬರದ, ಮುಂತಾದವರು ಇದ್ದರು.    

ಡಾ. ಸರ್ವಮಂಗಳಾ ಎಂ. ಕುದರಿ ಅವರ ಪರಿಚಯ: ಕಳೆದ 25 ವರ್ಷಗಳಿಂದ  ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈಗಿನ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಪ್ರಥಮ ಪಿ.ಎಚ್‌.ಡಿ ಯನ್ನು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ: ಒಂದು ಅಧ್ಯಯನ ಎಂಬ ವಿಷಯ ಮೇಲೆ 2012 ರಲ್ಲಿ ಪಡೆದಿದ್ದಾರೆ.  

ಮುರಘಾಮಠ ನಡೆಸುವ ವಚನ ಕಮ್ಮಟ ಪರೀಕ್ಷೆಗಳಿಗೆ ನೂರಾರು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ವಿವಿಧ ಸಂಘ, ಸಂಸ್ಥೆಯವರು ಶಿಕ್ಷಕ ರತ್ನ, ಬಸವ ಚೇತನ, ಬಸವ ಜ್ಯೋತಿ, ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.  ಈಗ ನಿವೃತ್ತ ನಂತರ ಡಾ. ಸರ್ವಮಂಗಳಾ  ಅವರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಸೇವೆ ಸಮಾಜಕ್ಕೆ ಸಲ್ಲಿಸುವಂತಾಗಲಿ ಎಂದು ಸಮಿತಿಯವರು ಅಭಿನಂದಿಸಿ, ಶುಭ ಕೋರಿದರು.