ಜಮಖಂಡಿ

ಡಿ.ಬಾಸ್ ದರ್ಶನ ಅವರ ಮೇಲೆ ಚಪ್ಪಲಿ ಎಸೇದಿರುವುದು ಖಂಡನೀಯ

ಡಿ.ಬಾಸ್ ದರ್ಶನ ಅವರ ಮೇಲೆ ಚಪ್ಪಲಿ ಎಸೇದಿರುವುದು ಖಂಡನೀಯ
ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಡಿ,ಬಾಸ್ ದರ್ಶನ ಅಭಿಮಾನಿ ಬಳಗದವರು ಕೆಲಕಾಲ ಪ್ರತಿಭಟನೆಯನ್ನು ನಡೆಸಿದರು,

ಲೋಕದರ್ಶನ ವರದಿ

ಜಮಖಂಡಿ 21: ಕನ್ನಡ ಚಲಚಿತ್ರದಲ್ಲಿ ನಟಿಸುವ ನಟರು ಪ್ರತಿಯೊಬ್ಬರು ಕನ್ನಡದ ಅಭಿಮಾನಿಗಳು. ಅವರನ್ನು ಪ್ರೀತಿಯಿಂದ ಗೌರವಿಸಿ. ಕನ್ನಡ ಚಿತ್ರರಂಗವನ್ನು ಬೆಳಸುವದು ಪ್ರೇಕ್ಷಕರ  ಕರ್ತವ್ಯವಾಗಿದೆ. ಪ್ರತಿಯೊಬ್ಬ ಚಲನಚಿತ್ರ ನಟರಿಗೆ ಅಭಿಮಾನಿಗಳು ಇರುತ್ತಾರೆ. ಡಿ,ಬಾಸ್ ದರ್ಶನ ಅವರ ಮೇಲೆ ಚಪ್ಪಲಿ ಏಸೇದಿರುವುದು ಖಂಡನೀಯ ಎಂದು ಡಿ,ಬಾಸ್ ಅಭಿಮಾನಿ ಬಲಗದ ಅಧ್ಯಕ್ಷ ಅಮೃತ ಗಾಡಿವಡ್ಡರ ಹೇಳಿದರು.

ನಗರದ ಎ,ಜಿ,ದೇಸಾಯಿ ವೃತ್ತದಲ್ಲಿ ಡಿ,ಬಾಸ್ ದರ್ಶನ ಅಭಿಮಾನಿ ಬಳಗದವರು ಕೆಲಕಾಲ ಪ್ರತಿಭಟನೆಯನ್ನು ನಡೆಸಿ. ನಂತರ ಮಾತನಾಡಿದ ಅವರು. ಹೊಸಪೇಠದಲ್ಲಿ ದರ್ಶನ ಅವರ ಮೇಲೆ ಚಪ್ಪಲಿ ಏಸೇದು ಕನ್ನಡ ಚಿತ್ರರಂಗದ ಕಲಾವಿದವಿರಿಗೆ ಅಪಮಾನ ಮಾಡಿದ್ದಾರೆ. ಪ್ರತಿಯೊಬ್ಬ ಕಲಾವಿದರಿಗೆ ಅವರ ಅಭಿಮಾನಿಗಳು ಸಾವಿರಾರು ಜನ ಅಭಿಮಾನಿಗಳು ಇದ್ದಾರೆ. ಆದರೆ ಡಿ,ಬಾಸ್ ದರ್ಶನ ಅವರ ಮೇಲೆ ಚಪ್ಪಲಿ ಏಸೇದಿರುವ ವ್ಯಕ್ತಿಯನ್ನು ಬಂಧಿಸಿ. ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಶಹರ ಠಾಣಿಯ ಪಿಎಸ್ಐ ಅವರಿಗೆ ಮನವಿ ಸಲಿಸಿದರು.

ವಸಂತ ಭೂವಿ.ಆನಂದ ಗಣಾಚಾರಿ. ಸಂತೋಷ ಭೂವಿ. ಪ್ರೀತಮ ಬಿರಾದರ. ನವೀನ ಭೂವಿ. ದಶರತ ಝಂಡೆ. ಸಾಗರ ದಾಬಡೆ. ಸಂಗಮೇಶ ಜಾಮಗೌಡರ. ಆಕಾಶ ಜೋತಗೊಂಡ. ಸುಮೀತ ಪೂಜಾರಿ. ಕಿರಣ ಹುದ್ದಾರ ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ