ಮೂರು ದಿನದ ಪ್ರತಿಭಟನೆ: 304 ಜನರ ಸಾವು ..!!
ಟೆಹರಾನ್ ಡಿ, 17ಇರಾನ್‌ನಲ್ಲಿ ತೈಲಬೆಲೆ
ಹೆಚ್ಚಳ ವಿರೋಧಿಸಿ ದೇಶಾದ್ಯಂತ ನವೆಂಬರ್
ನಲ್ಲಿ ನಡೆದ ಮೂರು ದಿನದ ಪ್ರತಿಭಟನೆ,ನಂತರದ ಹಿಂಸಾಚಾರದಲ್ಲಿ ಕನಿಷ್ಠ 304 ಜನರು ಮೃತಪಟ್ಟಿದ್ದಾರೆ ಎಂದು ಅಮ್ನೆಸ್ಟಿ
ಇಂಟರ್‌ನ್ಯಾಷನಲ್ ಸಂಸ್ಥೆ ಸತ್ಯ ಸಂಗತಿ ಬಹಿರಂಗ ಪಡಿಸಿದೆ. 15 ಮತ್ತು 17 ವರ್ಷ ವಯಸ್ಸಿನ ಇಬ್ಬರು
ಯುವಕರು ಸೇರಿದಂತೆ ಒಟ್ಟಾರೆ 208 ಸಾವು ಸಂಭವಿಸಿದೆ ಎಂದು ಈ ಮೊದಲು ಅಂದಾಜು ಮಾಡಲಾಗಿತ್ತು . ಆದರೆ
ಅದಕ್ಕಿಂತಲೂ ಹೆಚ್ಚಿನ ಸಾವು ನೋವು ವರದಿಯಾಗಿದೆ
ಆದರೆ ಇದನ್ನೂ ಇರಾನ್ ಸರಕಾರ "ಸಂಪೂರ್ಣ ಸುಳ್ಳು" ಎಂದು ತಳ್ಳಿಹಾಕಿದೆ.ಅಧಿಕಾರಿಗಳು ಪ್ರತಿಭಟನಾಕಾರರನ್ನು
"ಹತ್ಯಾಕಾಂಡ" ಮಾಡಿದ ನಂತರ, ಅವರ ಸಾವುಗಳನ್ನು
ಮುಚ್ಚಿಹಾಕಲು "ವ್ಯಾಪಕ-ಪ್ರಮಾಣದ ಸಂಚು ಮಾಡಿದ್ದರು ಎಂಬ ಭಯಾನಕ ಸಾಕ್ಷ್ಯ ಸಂಗ್ರಹಿಸಿರುವುದಾಗಿ
ಅಮ್ನೆಸ್ಟಿ ಸಂಸ್ಥೆ ಹೇಳಿಕೊಂಡಿದೆ. "ನವೆಂಬರ್ 15 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದ
ನಂತರ ಇರಾನ್ ಅಧಿಕಾರಿಗಳು ಭೀಕರ ದೌರ್ಜನ್ಯ ನಡೆಸುತ್ತಿದ್ದಾರೆ" ಎಂದು ಲಂಡನ್ ಮೂಲದ ಹಕ್ಕುಗಳ
ಕಾವಲು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿತ್ತು. ಇರಾನ್ ನಿರ್ದಯ ದಮನದ ಬಗ್ಗೆ ಮಾತನಾಡುವುದನ್ನು ತಡೆಯಲು. ಸಾವಿರಾರು
ಪ್ರತಿಭಟನಾಕಾರರು ಮತ್ತು ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳನ್ನು"
ಬಂಧಿಸಲಾಗಿತ್ತು ಎಂದು ಸಂಸ್ಥೆ ಹೇಳಿಕೊಂಡಿದೆ ಆದರೆ
ಇದುವರೆಗೆ ಕೇವಲ ಐವರು ಮಾತ್ರ ಮೃತಪಟ್ಟಿದ್ದಾರೆ ಎಂದೂ ಸರಕಾರಿ ಮೂಲಗಳು ಹೇಳಿವೆ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 