ತಾಲ್ಲೂಕಿಗೆ ಮಿನಿ ವಿಧಾನಸೌಧ ಅವಶ್ಯ: ಕಿರಣಕುಮಾರ್
ಲೋಕದರ್ಶನ ವರದಿ
ಕುಕನೂರು 27: ಕುಕನೂರ ತಾಲ್ಲೂಕ್ಕಾಗಿ 4ವರ್ಷ ಕಳೆದಿವೆ ತಾಲ್ಲೂಕಿನ ಅಭಿವೃದ್ಧಿಗೆ ಮಿನಿ ವಿಧಾನಸೌಧ ಅವಶ್ಯವಿದೆ ಪಕ್ಷಬೇದ ಮರೆತು ಎಲ್ಲರೂ ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ಹೇಳಿದರು.
ಕುಕನೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ ಪಟ್ಟಣ ಪಂಚಾಯಿತಿಯ ಆವರಣದಲ್ಲಿ 73ನೇ ಗಣರಾಜ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಒಂದೇ ಜಾಗದಲ್ಲಿ ತಾಲ್ಲೂಕಿನ ಎಲ್ಲ ಕಚೇರಿಗಳು ಮಾಡುವ ಉದ್ದೇಶ ನಮ್ಮದು ಅದಕ್ಕಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ 9ಎಕರೆಗೂ ಹೆಚ್ಚು ಜಾಗ ಖರೀದಿಸುತ್ತಿದ್ದೇವೆ ತಾಲ್ಲೂಕಿನ ಎಲ್ಲ ಇಲಾಖೆಗಳು ಇರುವ ಬಹುದೊಡ್ಡ ಆಡಳಿತಸೌಧ ನಿರ್ಮಾಣವಾಗಬೇಕು, ನಾನು ಬಂದು 2ವರ್ಷದಿಂದ ಕರೋನ ಸಂದರ್ಭದಲ್ಲಿ ಸಾಕಷ್ಟು ಕೆಲಸಗಳಾಗಿವೆ ಪಿಂಚಣಿ ಅದಾಲತ್ ಸಾರ್ವಜನಿಕ ಕುಂದುಕೊರತೆಗಳ ಕಾರ್ಯಕ್ರಮ ಪ್ರತಿ ಗ್ರಾಂ ಪಂಚಾಯಿತಿ ಹಳ್ಳಿಗಳಲ್ಲಿ ಯಶಸ್ವಿ ಕೆಲಸಗಳನ್ನು ಮಾಡಿದ್ದೇವೆ, ಎಲ್ಲ ಅಭಿವೃದ್ಧಿ ಇದು ಪ್ರತಿಯೊಬ್ಬ ನಾಗರಿಕರು ಹಾಗೂ ಜನಪ್ರತಿನಿಧಿಗಳು ಸಹಕಾರ ಅತ್ಯಗತ್ಯ, ಕುಕನೂರು ಪಟ್ಟಣದಲ್ಲಿ ಸ್ವಚ್ಛಂದ ವಾತಾವರಣ ನಿರ್ಮಾಣವಾಗಬೇಕು ನಾಗರಿಕರು ಹಸಿ ಮತ್ತು ಒಣ ಕಸವನ್ನು ಬೇರಿ್ಡಸಿ ಪಂಚಾಯಿತಿಯ ಕಸದ ವಾಹನಕ್ಕೆ ಹಾಕಬೇಕು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಹೊಂದಬೇಕು ಮನೆಸುತ್ತಮುತ್ತಲಿನ ಕಲುಷಿತ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಂಜುನಾಥ್ ಬೆಲ್ಲದ್ ಪಟ್ಟಣ ಪಂಚಾಯ್ತಿ ಸದಸ್ಯರಾದ ಸಿದ್ದಯ್ಯ ಉಳ್ಳಗಡ್ಡಿ ರಾಮಣ್ಣ ಬಂಕದಮನಿ ಮಲ್ಲಿಕಾರ್ಜುನ ಚೌಧರಿ ಗಗನ್ ನೋಟಗಾರ್ ಪ್ರಶಾಂತ್ ಆರ್ಬೆರಳ್ಳಿನ್ ಮಹಾಂತೇಶ ಹೂಗಾರ ಸಿದ್ದು ದೊಡ್ಮನಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವರ್ಗ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.