ಸೀಗೆ ಹುಣ್ಣಿಮೆ ಅಂಗವಾಗಿ ಪೂಜೆ
ಕುಕನೂರ 10 : ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಸೀಗೆ ಹುಣ್ಣಿಮೆ ಅಂಗವಾಗಿ ಮಹಿಳೆಯರು ಮಹಿಳೆಯರು ಅನ್ನದಾನೀಶ್ವರ ಮಠದಲ್ಲಿ ಪ್ರತಿಷ್ಠಾಪಿಸಿದ ಸೀಗವ್ವನಿಗೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಮಾತನಾಡಿತ್ತಾ ಅನಿತಾ ಹೊಸಮಠ ಒಂದು ಕಾಳು ಬಿತ್ತಿ ಸಾವಿರ, ಸಹಸ್ರ ಕಾಳು ನೀಡುವ ತಾಯಿಯೆಂದರೆ ಅದು ಭೂಮಿ ತಾಯಿ. ಭಾರತೀಯ ಕೃಷಿ ಪರಂಪರೆಯಲ್ಲಿ ಕೃಷಿ ಭೂಮಿಯನ್ನು ತಾಯಿಯೆಂದೇ ಪರಿಗಣಿಸಲಾಗುತ್ತದೆ. ಈ ಭೂಮಿ ತಾಯಿ ರೈತಾಪಿ ವರ್ಗದ ಜೀವಾಳ. ಆಕೆಯೇ ಎಲ್ಲ. ಆಕೆಯನ್ನೂ ಪೂಜಿಸುವ ಮತ್ತು ಆರಾಧಿಸುವ ಹಬ್ಬವೊಂದಿದೆ. ಅದುವೇ ಸೀಗೆ/ಸೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ. ದಸರಾ ಹಬ್ಬದಲ್ಲಿ ಬನ್ನಿ ಮುಡಿದ ರೈತರು, ಇದೀಗ ಸೀಗೆ ಹುಣ್ಣಿಮೆ ಸಡಗರದಲ್ಲಿದ್ದಾರೆ.ಕರ್ನಾಟಕದಲ್ಲಿ ಈ ಹುಣ್ಣಿಮೆಯ ಆಚರಣೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಗಿದು ಹಬ್ಬವೇ ಸರಿ ಎಂದರು. ಸುಧಾ ಹೊಸಮಠ, ಜ್ಯೋತಿ ಮುಂಡರಗಿ, ಕಾವ್ಯ ಗುರುಮಠ, ಶೈಲ ನೋಟಗಾರ, ಕವಿತಾ ಗುತ್ತಿ, ಶ್ರೀದೇವಿ ಮಳಗಿ, ದೇವಮ್ಮ ಕರಿಗರ, ಚಂದ್ರಿಕಾ, ಭವಾನಿ, ಲತಾ ಮುಂಡಸದ ಮತ್ತು ಇತರರು ಇದ್ದರು.