ತಿದ್ದುಪಡಿ ಮಸೂದೆ ಅಂಗೀಕಾರದಿಂದ ಅಸ್ಸಾಂ ಜನತೆ ಆತಂಕ ಪಡಬೇಕಿಲ್ಲ-ಪ್ರಧಾನಿ
ನವದೆಹಲಿ,12 ಪೌರತ್ವ ತಿದ್ದುಪಡಿ
ಮಸೂದೆಗೆ ಸಂಸತ್ ಅಂಗೀಕರಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ನಡುವೆಯೇ ಪ್ರಧಾನಿ ನರೇಂದ್ರಮೋದಿ
ಹೇಳಿಕೆ ನೀಡಿ ಮಸೂದೆ ಅಂಗೀಕಾರದಿಂದ ಅಸ್ಸಾಂ ಜನತೆ ಯಾವುದೇ ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ.
‘ಅಸ್ಸಾಂ ಜನರ ಸಾಂಸ್ಕøತಿಕ, ರಾಜಕೀಯ, ಭಾಷೆ ಮತ್ತು
ಭೂ ಹಕ್ಕುಗಳನ್ನು ಸಾಂವಿಧಾನಿಕವಾಗಿ ಸಂರಕ್ಷಿಸಲು ಕೇಂದ್ರ ಸರ್ಕಾರ ಮತ್ತು ತಾವು ಸಂಪೂರ್ಣ ಬದ್ಧರಾಗಿದ್ದೇವೆ.
ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರದಿಂದ ಯಾವುದೇ ಆತಂಕ ಪಡಬೇಕಿಲ್ಲ ಎಂಬ ಭರವಸೆಯನ್ನು ಅಸ್ಸಾಂನ
ಸಹೋದರರು ಹಾಗೂ ಸಹೋದರಿಯರಿಗೆ ನೀಡುತ್ತಿದ್ದೇನೆ.’ ಎಂದು ಪ್ರಧಾನಿ ನರೇಂದ್ರಮೋದಿ ಸರಣಿ ಟ್ವೀಟ್‍ಗಳಲ್ಲಿ
ಹೇಳಿದ್ದಾರೆ. ‘ನಿಮ್ಮ ಹಕ್ಕುಗಳು, ವಿಶಿಷ್ಟ ಅಸ್ತಿತ್ವ ಮತ್ತು ಸುಂದರ ಸಂಸ್ಕøತಿಯನ್ನು ಯಾರೊಬ್ಬರೂ
ಕಸಿಯಲಾಗುವುದಿಲ್ಲ ಎಂಬ ಭರವಸೆಯನ್ನು ನೀಡುತ್ತಿದ್ದೇನೆ. ಅಸ್ಸಾಂ ಮತ್ತಷ್ಟು ಪ್ರಗತಿ ಸಾಧಿಸಿ ಪ್ರಜ್ವಲಿಸಬೇಕು.’
ಎಂದು ಪ್ರಧಾನಿ ಹೇಳಿದ್ದಾರೆ. ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗಳ ನಡುವೆ ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿತ್ತು. ರಾಜ್ಯಸಭೆ ಅಂಗೀಕಾರದೊಂದಿಗೆ ಮಸೂದೆಗೆ ಸಂಸತ್‍ನ ಅಂಕಿತ
ದೊರೆತಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 