ಜನತೆ ಜಾಗೃತರಾಗಿ ಪರಿಸರ ರಕ್ಷಣೆಗೆ ಮುಂದಾಗಿ: ಗಜಾಕೋಶ
ಗೋಕಾಕ 06: ಗಿಡ-ಮರಗಳನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡುವಂತೆ ನಗರಸಭೆ ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ ಹೇಳಿದರು.
ಗುರುವಾರದಂದು ನಗರದ ಹೊರವಲದಲ್ಲಿರುವ ನಗರ ಸಭೆ ಘನ ತಾಜ್ಯ ವಸ್ತುಗಳ ವಿಲೇವಾರಿ ಹಾಗೂ ಸಂಸ್ಕೃರಣಾ ಘಟಕದ ಆವರಣದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆ ಮತ್ತು ನಗರಸಭೆಯವರು ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಪರಿಸರ ಸಮತೋಲನಕ್ಕೆ ಶೇಕಡಾ 33 ರಷ್ಟು ಅರಣ್ಯ ಪ್ರದೇಶದ ಅವಶ್ಯಕತೆ ಇದ್ದು ಈಗ ಶೇ 24ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಎಲ್ಲರೂ ಸಸಿಗಳನ್ನು ನೆಡುವ ಮೂಲಕ ಪಾಲನೆ ಪೋಷಣೆ ಮಾಡಿ ಪರಿಸರ ಸಮತೋಲನವನ್ನು ಕಾಪಾಡಲು ಮುಂದಾಗಬೇಕು. ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು. ವಾಯುಮಾಲಿನ್ಯವನ್ನು ತಡೆಗಟ್ಟಬೇಕು. ಇದಕ್ಕೆ ಜನತೆ ಜಾಗೃತರಾಗಿ ಪರಿಸರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಪ್ರಭಾರಿ ಪೌರಾಯುಕ್ತ ವಿ.ಎಸ್.ತಡಸಲೂರ, ನಗರಸಭೆ ಅಧಿಕಾರಿಗಳಾದ ಎಮ್.ಎನ್.ಸಗರೇಕರ, ಆರ್.ಎಸ್.ರಂಗಸುಭೆ, ಕೆ.ಎಸ್.ಕೋಳಿ, ಜೆಸಿಐ ಸಂಸ್ಥೆಯ ಅಧ್ಯಕ್ಷ ಮಹಾವೀರ ಖಾರೆಪಾಠಣ, ಪದಾಧಿಕಾರಿಗಳಾದ ವಿಷ್ಣು ಲಾತೂರ, ಕೆಂಪಣ್ಣ ಚಿಂಚಲಿ, ಧನ್ಯಕುಮಾರ ಕಿತ್ತೂರ, ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ರವಿ ಮಾಲದಿನ್ನಿ, ವಿಜಯಕುಮಾರ ಖಾರೇಪಾಠಣ, ಕೃಷ್ಣಾ ಕುರಬಗಟ್ಟಿ ಸೇರಿದಂತೆ ಅನೇಕರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 