ಹೆಂಡ್ತಿಯನ್ನ ಸಾಯಿಸಿ ಕಡಾಯಿಯಲ್ಲಿ ಕುದಿಸಿದ ಪತಿ!
ಕರಾಚಿ: ಜುಲೈ 15: ಭೀಕರ ಘಟನೆಯೊಂದರಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ತನ್ನ ಹೆಂಡತಿಯನ್ನು ಕೊಂದು ಕಡಾಯಿಯಲ್ಲಿ ಕುದಿಸಿದ್ದಾನೆ ಎಂದು ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.
ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆಮನೆಯಲ್ಲಿ ಆಕೆಯ ಪತಿ ಬುಧವಾರ ಆಕೆಯನ್ನು ಕುದಿಸಿದ ನಂತರ ಮಹಿಳೆ ನರ್ಗೀಸ್ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದು ಜಿಯೋ ನ್ಯೂಸ್ ವರದಿ ಮಾಡಿದೆ.
ಪೊಲೀಸರ ಪ್ರಕಾರ, ಬಜಾರ್ ಏಜೆನ್ಸಿಯ ಮಹಿಳೆಯ ಪತಿ ಆಶಿಕ್ ಶಾಲೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಎಂಟರಿಂದ ಒಂಬತ್ತು ತಿಂಗಳಿಂದ ಶಾಲೆ ಮುಚ್ಚಿತ್ತು. ಈ ವೇಳೆ ಆತ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಘಟನೆಯ ನಂತರ ಆಶಿಕ್ ತನ್ನ ಮೂವರು ಮಕ್ಕಳೊಂದಿಗೆ ಓಡಿಹೋಗಿದ್ದಾನೆ. ನಂತರ ಸಂತ್ರಸ್ತೆಯ 15 ವರ್ಷದ ಮಗಳು ಪೊಲೀಸರಿಗೆ ಕರೆ ಮಾಡಿದ್ದಾಳೆ.
ಪ್ರಾಥಮಿಕ ತನಿಖೆಗಳು ಮತ್ತು ಮಕ್ಕಳ ಹೇಳಿಕೆಗಳಿಂದ ತಿಳಿದುಬಂದಿರುವ ಪ್ರಕಾರ ಶಂಕಿತ ವ್ಯಕ್ತಿ ತನ್ನ ಹೆಂಡತಿಯನ್ನು ಅವರ ಮುಂದೆ ಕಡಾಯಿಯಲ್ಲಿ ಕುದಿಸುವ ಮೊದಲು ದಿಂಬಿನಿಂದ ಕತ್ತು ಹಿಸುಕಿದ್ದಾನೆ . ಮಹಿಳೆಯ ಒಂದು ಕಾಲು ಕೂಡ ಆಕೆಯ ದೇಹದಿಂದ ಬೇರ್ಪಟ್ಟಿದೆ. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ಆದಾಗ್ಯೂ, ಪತಿ ತನ್ನ ಹೆಂಡತಿಯನ್ನು ಅಕ್ರಮ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಬಲವಂತಪಡಿಸಿದ್ದಾರೆ. ಅವಳು ಅದನ್ನು ನಿರಾಕರಿಸಿದಾಗ ಅವಳನ್ನು ಕೊಲೆ ಮಾಡಿದ್ದಾನೆ ಎಂದು ಊಹಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗ್ತಿದೆ. ಈ ಆಘಾತಕಾರಿ ಘಟನೆಯು ಸುಮಾರು 11 ವರ್ಷಗಳ ಹಿಂದೆ ಸಂಭವಿಸಿದ ಇದೇ ರೀತಿಯ ಘಟನೆಯ ಭಯಾನಕ ನೆನಪುಗಳನ್ನು ಮರಳಿ ತಂದಿದೆ. ತನ್ನ ಅನುಮತಿಯಿಲ್ಲದೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಯೋಜಿಸಿದ ತನ್ನ ಪತಿಯನ್ನು ಕೊಂದು ಅವನ ದೇಹದ ಭಾಗಗಳನ್ನು ಬೇಯಿಸಲು ಯತ್ನಿಸಿದ ಮಹಿಳೆಯನ್ನು ನವೆಂಬರ್ 2011 ರಲ್ಲಿ ಪೊಲೀಸರು ಬಂಧಿಸಿದ್ದರು.