ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿ
ಮುಧೋಳ 22: ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿಯನ್ನು ಶುಕ್ರವಾರ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ,ಸಿಬಿಎಸ್ಇ ಶಾಲಾ ಅವರಣದಲ್ಲಿ ಆಚರಿಸಲಾಯಿತು. ಕನಕದಾಸರ ಜಯಂತಿ ಅಂಗವಾಗಿ ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ ಹಾಗೂ ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮಲ್ಲು ಕಳ್ಳೆನ್ನವರ, ಸುನಂದಾ ಬಾದರದಿನ್ನಿ, ನೇಹಾ ಪಾಟೀಲ್ ,ಮಾಲಾ ಪಾಟೀಲ್ ಮಾತನಾಡಿ ಜಯಂತಿಗಳು ಒಂದು ದಿನಕ್ಕೆ ಸೀಮಿತವಾಗಿತ್ತಿದೆ. ಇದು ಸರಿಯಾದ ಕ್ರಮವಲ್ಲ. ವರ್ಷಪೂರ್ತಿ ಮಹಾಪುರುಷರ ಚಿಂತನೆಗಳನ್ಮುಚಿಂತನೆಗಳನ್ಮು ನಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಜನಗಳು ಸೇರಿ ಜಯಂತಿಗಳನ್ನು ಆಚರಿಸುವ ಸ್ಥಿತಿ ನಿರ್ಮಾಣ ವಾಗಬೇಕು ಎಂದು ಹೇಳಿದರು. ಎಲ್ಲಾ ಮಹನೀಯರ ಬದುಕು ಆದರ್ಶಗಳನ್ನ ಅರಿತು ಅನುಸರಿಸುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದರು. ಪ್ರವೀಣ ಬಾಜಿ,ಮಾಲಾ ಪಾಟೀಲ್, ಯಮುನಾ ಗಿರಡ್ಡಿ ಸೇರಿದಂತೆ ಎಲ್ಲ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ಇದ್ದರು.