ರಷ್ಯಾದಲ್ಲಿ ಮಾಯವಾದ ಚಳಿ,ಚಳಿ....!!
ಮಾಸ್ಕೋ, ಡಿ20 ಜಗತ್ತಿ ಅನೇಕ ಭಾಗದಲ್ಲಿ ಈಗ ಹಿಮಪಾತ ಮತ್ತು ಚಳಿಗಾಳಿ ಬೀಸುತ್ತಿದೆ. ಪರಿಣಾಮವಾಗಿ ಅನೇಕ ಕಡೆ ರೈಲು ವಿಮಾನ ಸಂಚಾರಗಳು ರದ್ದಾಗಿ , ಜನಜೀವನದ ಮೇಲೆ
ಪರಿಣಾಮ ಬೀರುತ್ತಿದೆ ಇದೆಲ್ಲ ಮಾಮೂಲು ಸುದ್ದಿ . ಆದರೆ ಹೊಸ ಸಂಗತಿ, ಸುದ್ದಿ ಏನೆಂದರೆ
ರಷ್ಯಾದಲ್ಲಿ ಈಗ ಚಳಿಯೇ ಇಲ್ಲವಂತೆ.!! ಜನರು
ಅರೆ ಚಳಿಗಾಲ ಎಲ್ಲಿಗೆ ಹೋಯಿತು ಎಂದು ರಷ್ಯಾದ ರಾಜಧಾನಿ ಮಾಸ್ಕೋದ ನಿವಾಸಿಗಳು ಅಚ್ಚರಿಪಡುತ್ತಿದ್ದಾರೆ.ತಮಗೆ
ತಾವೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದರಂತೆ.! ಮಾಸ್ಕೋದಲ್ಲಿ 133 ವರ್ಷಗಳಲ್ಲೇ ಅಧಿಕ ಡಿಸೆಂಬರ್ ನಲ್ಲಿ ಉಷ್ಣತೆ ದಾಖಲಾಗಿದ್ದು, ಈ ಅವಧಿಯಲ್ಲಿ ಸಾಮಾನ್ಯವಾಗಿದ್ದ
ಹಿಮಪಾತ ಈ ಬಾರಿ ಸಂಭವಿಸಿಲ್ಲ.'ಇದು ನಮ್ಮ ಚಳಿಗಾಲವಲ್ಲ
ಎಂದೂ ಹಿರಿಯರೂ ಸಹ ಅಚ್ಚರಿಯಿಂದ ಕೇಳುತ್ತಾರೆ.ಸಾಮಾನ್ಯವಾಗಿ
ವರ್ಷದ ಈ ಅವಧಿಯಲ್ಲಿ ಹಿಮವು ರಸ್ತೆಗಳನ್ನು ಆವರಿಸಿಕೊಂಡಿರುತ್ತದೆ.ಹಾಗೂ ಕಟ್ಟಡಗಳಿಂದ ಮಂಜಿನ ಹನಿಗಳು
ಮುತ್ತಿನಂತೆ ಉದುರುತ್ತವೆ. ಈಗ ರಾತ್ರಿಯ ಉಷ್ಣತೆ
6 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ ಎಂದು ಹವಾಮಾನ
ಕೇಂದ್ರದ ಎಲೀನಾ ವೊಸೊಲ್ಯುಕ್ ಹೇಳಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 