ಭಾರತದ ಏಕತೆ, ಅಖಂಡತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಸಂವಿಧಾನವೇ ರಕ್ಷಾ ಕವಚ

ಭಾರತದ ಏಕತೆ, ಅಖಂಡತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಸಂವಿಧಾನವೇ ರಕ್ಷಾ ಕವಚ  The Constitution is the shield to protect India's unity, integrity and democracy.

ಲೋಕದರ್ಶನ ವರದಿ 

ಜಮಖಂಡಿ    01: ಭಾರತದ ಏಕತೆ, ಅಖಂಡತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಸಂವಿಧಾನವೇ ರಕ್ಷಾಕವಚವಾಗಿದ್ದು, ಅದನ್ನು ದೇಶಕ್ಕೆ ನೀಡಿದ ಮಹಾನ ವ್ಯಕ್ತಿ ಡಾ. ಬಿ.ಆರ್‌. ಅಂಬೇಡ್ಕರ್‌. ಕೇವಲ ಡಾ,ಬಾಬಾ ಸಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಿದರೆ ಸಾಲದು. ಪ್ರತಿಯೊಬ್ಬರು ಶಿಕ್ಷಣವಂತರಾಗಿ ಉನ್ನತ ಹುದ್ದೆಯಲ್ಲಿ ಇಲ್ಲದಿದರೆ ಡಾ,ಬಾಬಾ ಸಾಹೇಬರಿಗೆ ದ್ರೋಹ ಬಗ್ಗೆದಾಗೆ ಎಂದು ದಲಿತ ಸಮಾಜಕ್ಕೆ ಕೀಡಿ ಕಾರಿದ ಮೈಸೂರು ಉರಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ.  

ತಾಲೂಕಿ ಗೋಠೆ ಗ್ರಾಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಬುದ್ಧ ವಿಹಾರ ನಿರ್ಮಾಣ ಸಮಿತಿ, ಕಾಶೀಲಿಂಗೇಶ್ವರ ಕಮಿಟಿ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್ ಯುವಕ ಮಂಡಳದ ಸಹಯೋಗದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪಂಚಲೋಹದ ಪುತ್ಥಳಿಯನ್ನು ಅನಾವರಣ ಮಾಡಿ ಮಾತನಾಡಿದರು. 

ಪ್ರತಿಯೊಂದು ಊರು, ಗ್ರಾಮಗಳಲ್ಲಿ ಐಎಎಸ್, ಕೆಎಎಸ್,ಐಪಿಎಸ್, ಹೀಗೆ ಉನ್ನತ ಹುದ್ದೆ ತಲುಪುವ ಗುರಿ ಹೊಂದಬೇಕು. ನಿಮ್ಮ ಗ್ರಾಮದಲ್ಲಿ ಎಷ್ಟು ಜನರು ಐಎಎಸ್, ಐಪಿಎಸ್, ಕೆಎಎಸ್ ಎಷ್ಟು ಯುವಕರು ಶಿಕ್ಷಣ ಮುಗಿಸಿದ್ದಿರಿ ಎಂದು ಪ್ರಶ್ನೀಸಿದರು. ದೇವರ ಗುಡಿ ಹಿ ಗುಂಡಾರಗಳಿಗೆ ಹೋಗುವದು ಬಿಟ್ಟು ಗ್ರಂಥಾಲಯದ ಕಡೆಗೆ ಹೋಗಬೇಕು. ಯಾವ ದೇವರು ನಿಮ್ಮಗೆ ಶಿಕ್ಷಣ, ಅಭಿವೃದ್ಧಿ ನೀಡಲಾರದು. ನೀವು ಶಿಕ್ಷಣವಂತರಾದರೆ ಮಾತ್ರ ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಯಲು ಸಾಧ್ಯ. ಡಾ,ಬಾಬಾ ಸಾಹೇಬ ಅವರ ಬದುಕಿನ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಂಡು ಶಿಕ್ಷಣ ಹಾಗೂ ಜ್ಞಾನ ಸಂಪಾದನೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳಿಂದ ಸಮಾಜದ ಎಲ್ಲ ವರ್ಗಗಳಿಗೂ ಶಿಕ್ಷಣ, ಮತದಾನ ಹಾಗೂ ಸಮಾನ ಹಕ್ಕುಗಳು ದೊರಕಿವೆ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅಂಬೇಡ್ಕರ್ ಅವರ ಕನಸಿನ ನನಸಾಗಲು ಸಾಧ್ಯ. ಜಮಖಂಡಿಯಲ್ಲಿ ಡಾ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ಉದ್ಘಾಟನೆ ಮಾಡಿದು ದಿ,ಸಿದ್ದು ನ್ಯಾಮಗೌಡರು. ಅದನ್ನು ನವೀಕರಣ ಮಾಡಿದು ನಮ್ಮ ಅವಧಿಯಲ್ಲಿ. ಇಂದು ಗೋಠೆ ಗ್ರಾಮದಲ್ಲಿ ಪುತ್ಥಳಿ ಉದ್ಘಾಟನೆ ಮಾಡಿದು ನನ್ನ ಪುಣ್ಯ ಎಂದರು. 

ಬೆಳಗಾವಿ ವಲಯದ ಅಬಕಾರಿ ಆಯುಕ್ತ ಫಕೀರ​‍್ಪ ಚಲವಾದಿ ಮಾತನಾಡಿ, ಜಾತಿ ನಿರ್ಮೂಲನೆ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸುವುದು ಅಂಬೇಡ್ಕರ್ ಅವರ ಪ್ರಮುಖ ಆಶಯವಾಗಿತ್ತು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಗೋಪಿನಾಥ್ ಮೀಶಿ ಸ್ವಾಗತಿಸಿ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಜಮಖಂಡಿ ಮತಕ್ಷೇತ್ರದ ಶಾಸಕ ಪೋಟೋಕಾಲ್ ಪ್ರಕಾರ ಕಾರ್ಯಕ್ರಮವನ್ನು ರದ್ದು ಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿದ ಬುದ್ದುಮಾಂದ್ಯ ಶಾಸಕ ಜಗದೀಶ ಗುಡಗುಂಡಿ ಅವರಿಗೆ ಬರುವ ದಿನಗಳಲ್ಲಿ ತಕ್ಕಪಾಟವನ್ನು ಕಲಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡುತ್ತೇವೆ.ಜಮಖಂಡಿ ಮತಕ್ಷೇತ್ರದ ಕಾಯಂ ಶಾಸಕ ಆನಂದ ನ್ಯಾಮಗೌಡರು ಎಂದರು. 

ಸಿದ್ದಾರ್ಥ ಡಿ.ಚಿಮ್ಮಾ ಇದ್ಲಾಯಿ ಅಂಬೇಡ್ಕರ್ ಗೀತೆ ಹಾಡಿ ಸಂವಿಧಾನದ ಪೀಠಿಕೆಯನ್ನು ಭೋಧಿಸಿದರು. ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ದಳವಾಯಿ, ಕಾಲೇಜು ಪ್ರಾಂಶುಪಾಲ ಎಸ್‌.ಎಂ. ಹಾದಿಮನಿ, ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು, ಯುವಕರು ಹಾಗೂ ಅಂಬೇಡ್ಕರ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.