109ನೇ ದಿನದ ಬಲ್ಡೋಟ ವಿರೊಧಿ ಹೋರಾಟ ಪೂರ್ಣ
The 109th day of the anti-baldota struggle is over.
ಉದ್ಯೋಗ ಜಪ ಬಿಡಿ: ಬಲ್ದೋಟ ಹಟಾವೋ ಹೋರಾಟದಲ್ಲಿ ಹಿರೇಮಠ ಅಭಿಮತ
ಕೊಪ್ಪಳ 16 : 109ನೇ ದಿನದ ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರೋಧಿ ಧರಣೆ ಬೆಂಬಲಿಸಿ ಧಾರವಾಡ ನಿವಾಸಿ, ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಜೀವ ಉಳಿಸಿಕೊಳ್ಳಲು ಸುದೀರ್ಘ ಕಾಲದ ಹೋರಾಟ ಅನಿವಾರ್ಯವಾಗಿದೆ. ಉದ್ಯೋಗ ಎನ್ನುವುದು ನಮ್ಮ ಜೀವ, ಆರೋಗ್ಯ ಕೆಡಿಸುವಂತಿರಬಾರದು. ಅಭಿವೃದ್ಧಿ ಬಗ್ಗೆ ಮಾತನಾಡುವ ಜನರು ಇಲ್ಲಿನ ನೈಜ ಸ್ಥಿತಿ ತಿಳಿಯಬೇಕು. ಇಲ್ಲಿರುವ ಜನರು ಹೋರಾಟ ಮಾಡಿ ಜೀವ ಉಳಿಸಿಕೊಳ್ಳುವುದು ಅನಿವಾರ್ಯ ಎಂದರು.
ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಮಾತನಾಡಿ, ಮುಂದಿನ ಭವಿಷ್ಯದ ದೃಷ್ಟಿಯಿಂದ ಫೆಬ್ರವರಿ 24 ರ ಬಂದ್ ಯಶಸ್ವಿ ಮಾಡಬೇಕು, ಸರ್ಕಾರದ ಮೇಲೆ ಒತ್ತಡ ಹೇರಲು ಇದೊಂದು ನಮಗಿರುವ ಮಾರ್ಗ, ಜನರು ಬೀದಿಗೆ ಬಂದು ವಾಣಿಜ್ಯ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಸ್ವಯಂ ಪ್ರೇರಣೆಯಿಂದ ಸ್ಥಗಿತ ಮಾಡಿ ಹೋರಾಡೋಣ ಎಂದರು.
ಧರಣಿ ನೇತೃತ್ವವಹಿಸಿದ್ದ ಮತ್ತೊಬ್ಬ ಹಿರಿಯ ಸಾಹಿತಿ ಎ.ಎಂ.ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ರಾಜೂರು, ವೀರಣ್ಣ ಹುರಕಡ್ಲಿ, ಶಾಂತಯ್ಯ ಅಂಗಡಿ, ಈರಯ್ಯಸ್ವಾಮಿ ಸಾಲಿಮಠ, ಗಂಗಾಧರ ಖಾನಾಪೂರ, ಇಂದುಮತಿ ಬ್ಯಾಲಹುಣಸಿ, ಮಲ್ಲಪ್ಪ ಮಾಲಿಪಾಟೀಲ, ಜಿ.ಬಿ.ಪಾಟೀಲ, ಎಲ್.ಎಫ್.ಪಾಟೀಲ, ಬಿ.ಜಿ.ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಬಾವಿ, ಸೋಮಶೇಖರ್ ಆರಾಳ, ಸುಭಾನ್ ಸಾಬ್ ನೀರಲಗಿ, ಮಂಜುನಾಥ ಹಂಡಿ, ಗವಿಸಿದ್ದಪ್ಪ ಮಾಲಿಪಾಟೀಲ, ಮಹಾದೇವಪ್ಪ ಮಾವಿನಮಾಡು, ನಾಗರಾಜ ಕುಷ್ಟಗಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 