ವಿಶ್ವದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 27.2 ಮಿಲಿಯನ್‌ಗೇರಿಕೆ
ವಾಷಿಂಗ್ಟನ್, ಸೆಪ್ಟೆಂಬರ್ 8 : ವಿಶ್ವದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 27.2 ಮಿಲಿಯನ್ ತಲುಪಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8.91 ಲಕ್ಷ ತಲುಪಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ಮಂಗಳವಾರ ಮಾಹಿತಿ ನೀಡಿದೆ.
ವಿಶ್ವವಿದ್ಯಾಲಯದ ಸಿಸ್ಟಮ್ಸ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಕಾರ, ಒಟ್ಟು ಪ್ರಕರಣಗಳ ಸಂಖ್ಯೆ 27,002,224 ಮತ್ತು ಮೃತರ ಸಂಖ್ಯೆ 882,053 ತಲುಪಿದೆ.
ಅಮೆರಿಕ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ 63 ಲಕ್ಷ ಪ್ರಕರಣಗಳು ವರದಿಯಾಗಿದ್ದು 1.89 ಲಕ್ಷ ಮಂದಿ ಮೃತಪಟ್ಟಿದ್ದಾರೆ.
ಭಾರತ 42.04 ಲಕ್ಷ ಪ್ರಕರಣಗಳು ಮತ್ತು 71,642 ಸಾವಿನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ (4,147,794), ನಂತರದ ಸ್ಥಾನದಲ್ಲಿ ರಷ್ಯಾ (1,027,334), ಪೆರು (689,977), ಕೊಲಂಬಿಯಾ (666,521), ದಕ್ಷಿಣ ಆಫ್ರಿಕಾ (639,362), ಮೆಕ್ಸಿಕೊ (637,509) ಮತ್ತು ಸ್ಪೇನ್ (525,549) ಎಂದು ಸಿಎಸ್‌ಎಸ್‌ಇ ಅಂಕಿ ಅಂಶಗಳು ತಿಳಿಸಿವೆ.
ಸಾವಿನಲ್ಲಿ ಮೆಕ್ಸಿಕೋ (67,781), ಬ್ರಿಟನ್ (41,643) ಮತ್ತು ಇಟಲಿ (35,553) ಸಾವುಗಳು ವರದಿಯಾಗಿವೆ.