ವಿಶ್ವವಿದ್ಯಾಲಯದ ತಾತ್ಕಾಲಿಕ ತಡೆಗೆ ವಿರೋಧಿಸಿ ಉಪನ್ಯಾಸ ಪ್ರತಿಭಟನೆ
ಜಮಖಂಡಿ 20:ಜಮಖಂಡಿಗೆ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಜ್ಯ ಸಕರ್ಾರ ಮಂಜೂರು ಮಾಡಿದ ವಿಶ್ವವಿದ್ಯಾಲಯದ ತಾತ್ಕಾಲಿಕ ತಡೆಯನ್ನು ಖಂಡಿಸಿ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಜಮಖಂಡಿ ವಿಭಾಗ ತೀವ್ರ ವಿರೋಧಿಸಿ ಕಪ್ಪು ಪಟ್ಟಿಯನ್ನು ಧರಿಸುವುದರ ಮೂಲಕ ಪ್ರತಿಭಟನೆಯನ್ನು ನಡೆಸಿದರು.
ರಾಜ್ಯಾಧ್ಯಕ್ಷ ಬಿ. ಬಿ. ಪಾಟೀಲ, ಉಪಾಧ್ಯಕ್ಷ ಎಸ್. ಪಿ. ಆಲಗೂರ, ಎ. ಆರ್. ಗೆಣ್ಣೂರ, ಕಲಾವತಿ ಗುರವ, ಪ್ರಧಾನ ಕಾರ್ಯದರ್ಶಿ ಡಾ. ಎಮ್. ಎಮ್. ಅಂಬಲಿ, ಓ. ಎಮ್. ಬಿರಾದಾರ, ಅಂಜನಾ ಕೆ. ರಾಠೋಡ, ಸೀಮಾ ಬಿ. ಲಿಂಗನೂರ, ಸೀಮಾ ಎಸ್. ಬರಗಡಗಿ, ಅಮಿತಾ ಸಣ್ಣಕ್ಕಿ, ರಾಜೇಶ್ವರಿ ಆರ್. ರಾಯಣ್ಣವರ, ಶಿವಾನಂದ ಎಮ್. ಕುಂಬಾರ ಸೇರಿದಂತೆ ಅನೇಕರು ಇದ್ದರು.