ಮುಧೋಳ

ಸ್ವಾಮಿ ವಿವೇಕಾನಂದರ ಬದುಕು ಪ್ರತಿಯೊಬ್ಬರಿಗೂ ದಿವ್ಯ ಪ್ರೇರಣೆ: ಗುಡೆಪ್ಪನವರ

ಸ್ವಾಮಿ ವಿವೇಕಾನಂದರ ಬದುಕು ಪ್ರತಿಯೊಬ್ಬರಿಗೂ ದಿವ್ಯ ಪ್ರೇರಣೆ: ಗುಡೆಪ್ಪನವರ

ಮುಧೋಳ : ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಬದುಕು ಸರ್ವಕಾಲಕ್ಕೂ ಆದರ್ಶ ಪ್ರೇರಣೆಯಾದದ್ದು ಅವರ ಬದುಕಿನಲ್ಲಿನ ಕೆಲವು ಅಂಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗುರುಕುಲ ಕಲಾ ಪ್ರತಿಷ್ಠಾನ ಜಿಲ್ಲಾ ಅಧ್ಯಕ್ಷ ವೆಂಕಟೇಶ ಗುಡೆಪ್ಪನವರ ಹೇಳಿದರು.  

ಬುಧವಾರ  ನಗರದ ಸಂಗಮನಾಥ ಶಾಲಾ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರ ಬದುಕು ನಮಗೆ ದಿವ್ಯ ಪ್ರೇರಣೆ ಕೊಡುತ್ತದೆ. ಯಾರು ತಮ್ಮನ್ನು ತಾವು ಸಾಮಾಜಿಕವಾಗಿ ಸಮಾಜಕ್ಕಾಗಿ ಅರ​‍್ಿಸಿ ಬದುಕಿರುತ್ತಾರೋ ಅವರೆಲ್ಲರೂ ಅಜರಾಮರಾಗಿ ಉಳಿಯುತ್ತಾರೆ. ಇತಿಹಾಸದ ಸತ್ಯ ಮತ್ತು ವಾಸ್ತವಿಕ ಸತ್ಯವು ಹೌದು ಎಂದು ಹೇಳಿದರು. ನಮ್ಮ ಜೀವನದಲ್ಲಿ ಉತ್ತಮ ಉಪಕಾರಿಯಾಗಿ ಒಳ್ಳೆಯ ಅಂಶಗಳನ್ನು ನಾವು ಅಳವಡಿಸಿಕೊಂಡರೆ ನಾವು ಹೊಸ ಪರಿವರ್ತನೆಯನ್ನು ಕಾಣುವುದಕ್ಕೆ ಸಾಧ್ಯವಿದೆ ಹಾಗಾಗಿ ನಾವು ವಿವೇಕಾನಂದರ ಕೆಲವು ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು  

ಕಾರ್ಯಕ್ರಮದಲ್ಲಿ ತ್ರಿವೇಣಿ ಶಿಕ್ಷಣ ಸಂಸ್ಥೆಯ  ಸಂಸ್ಥಾಪಕ     ಅಧ್ಯಕ್ಷ ಶಿವಕುಮಾರ ಮಲಘಾಣ,  ಕಾರ್ಯಾಧ್ಯಕ್ಷ ಶಿಶಿರ ಮಲಘಾಣ, ಆಡಳಿತಾಧಿಕಾರಿ ಮಲ್ಲು ಕಳ್ಳೆನವರ,  ಪ್ರಾಚಾರ್ಯ ಡಾ.ಎಸ್‌.ಖಾನ್,ಮುಖ್ಯೋಪಾಧ್ಯಾಯರುಇದ್ದರು  ಶಿಕ್ಷಕ  ಪ್ರಕಾಶ ಚಿಮ್ಮಲಗಿ ಮಾತನಾಡಿದರು. ಪ್ರಗತಿ ಕುಲಕರ್ಣಿ  ನಿರೂಪಿಸಿ ವಂದಿಸಿದರು.ಸ್ವಾಮಿ ವಿವೇಕಾನಂದ ವೇಷ ಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪುಸ್ತಕ ಬಹುಮಾನ ನೀಡಲಾಯಿತು. 


ಸುದ್ದಿ ಓದಿ