ಮುಧೋಳಕ್ಕೆ ಸ್ವಚ್ಚ ಸರ್ವೇಕ್ಷಣಾ-2021 ಪ್ರಶಸ್ತಿ
ರಾಜ್ಯದ 9 ನಗರಗಳಲ್ಲಿ ಮುಧೋಳಕ್ಕೆ ಸ್ಥಾನ
ಮುಧೋಳ11: ಕೇಂದ್ರ ಸರ್ಕಾರದ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಸ್ವಚ್ಛ ಮಹೋತ್ಸವದಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು ಸ್ವಚ್ಛ ಸರ್ವೇಕ್ಷಣ - 2021ರ ಫಲಿತಾಂಶ ಬಹಿರಂಗವಾಗಿದ್ದು, ಬೃಹತ್ ಬೆಂಗಳೂರು,,ಹುಬ್ಬಳ್ಳಿ-ದಾರವಾಡ, ಮೈಸೂರು, ಹೊಸದುರ್ಗ, ಕೃಷ್ಣರಾಜನಗರ, ಕುಮಟಾ, ಪಿರಿಯಾಪಟ್ಟಣ ಜೊತೆಗೆ ಮುಧೋಳ ನಗರ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದಿದೆ.
ಸ್ವಚ್ಛ ಸರ್ವೇಕ್ಷಣಾ 2021 ಸಫಾಯಿಮಿತ್ರ ಸುರಕ್ಷಾ ಚಾಲೆಂಜ್ನ ಫಲಿತಾಂಶಗಳ ಇದಾಗಿದ್ದು ಗೌರವಾನ್ವಿತ ರಾಷ್ಟಪತಿಗಳು, ನವೆಂಬರ್ 20, 2021 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ನಗರಸಭೆಯ ಪೌರಾಯುಕ್ತರು ಹಾಗೂ ಅಧ್ಯಕ್ಷರುಗಳಿಗೆ ನೀಡಲಾಗುತ್ತದೆ.ನಗರದ ಸ್ವಚ್ಚಾ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಈ ಸ್ಪರ್ಧೆ ಇರುತ್ತದೆ ಈ ವರ್ಷರಾಜ್ಯದ 9 ನಗರಗಳ ಪೈಕಿ ಇದೆ ಮೊದಲ ಬಾರಿಗೆ ಮುಧೋಳ ನಗರಕ್ಕೆ ಈ ಪ್ರಶಸ್ತಿ ದೊರಕಿದೆ. ಕೆಲವು ವರ್ಷಗಳ ಹಿಂದು ಬರೀ ದೂಳು ತುಂಬಿದ್ದ ನಗರದಲ್ಲಿ ಒಂದು ವರ್ಷದಿಂದ ಇತ್ತೀಜಿಗೆ ಡಾಂಬಕರಿಕರಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಗಳು ಹಾಗೂ ಸ್ವಚ್ಚತೆಗಾಗಿ ಹೆಚ್ಚು ಕಸ ಬೀಳುವ ಸಂದರ್ಭದಲ್ಲಿ ಆ ಸ್ಥಳದಲ್ಲಿ ರಂಗೋಲಿ ಹಾಕಿ ನಗರಸಭೆಯ ಕಾರ್ಮಿಕರು ಸ್ವಚ್ಚ ಮಾಡಿದ್ದು ಸೇರಿದಂತೆ ಎಲ್ಲ ಕಾರ್ಮಿಕರ ಶ್ರಮದಿಂದ ಈ ಪ್ರಶಸ್ತಿ ಬಂದಿದೆ.
“ ಕೇಂದ್ರ ಸರ್ಕಾರದ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಚನಗರಗಳಿಗೆ ಪ್ರತಿ ವರ್ಷ ನೀಡುವ ಸ್ವಚ್ಛ ಸರ್ವೇಕ್ಷಣಾ 2021ಮುಧೋಳ ನಗರಕ್ಕೆ ಬಂದಿದ್ದು ಸಂತಸ ವಾಗಿದ್ದು ನಾನು ಬರುವಕ್ಕಿಂತ ಮುಂಚೆಹಾಗೂ ನಾನು ಬಂದ ನಂತರ ಮಾಡಿದ ಕಾರ್ಯ ಜಲಸಂಪನ್ಮೂಲಸಚಿವ ಗೋವಿಂದ ಕಾರಜೋಳ ,ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಹಾಗು ಎಲ್ಲಾ ಮಾನ್ಯ ಅಧಿಕಾರಿಗಳು,ಹಾಗೂ ನಗರಸಭಭೆಯ ಅಧ್ಯಕ್ಷೆ ಸ್ವಾತಿ ಕುಳಕರ್ಣಿ ಅವರ ಸಹಕಾರ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಸಿಬ್ಬಂದಿ ಕಾರ್ಮಿಕರಿಗೆ ಈ ಪ್ರಶಸ್ತಿ ಸಲ್ಲುತ್ತದೆ.
ಎಸ್.ಜಿ.ಅಂಬಿಗೇರ
ಪೌರಾಯುಕ್ತರು ನಗರಸಭೆ ಮುಧೋಳ;
“ಮುಧೋಳ ನಗರ ಸ್ವಚ್ಚಹಾಗೂ ಸುಂದರ ನಗರವಾಗಿ ರಾಜ್ಯದಲ್ಲಿ ರಾರಾಜಿಸಬೇಕು ಎಂದು ಜಲಸಂಪನ್ಮೂಲ ಸಚಿವಗೋವಿಂದ ಕಾರಜೋಳ ಅವರ ನಿರಂತರ ಪ್ರಯತ್ನ ಹಾಗೂ ನಮ್ಮ ಕಾರ್ಯಕ್ರಮಕ್ಕೆ ಶೇ100ರಷ್ಟು ಸಹಕಾರ ಹಾಗೂ ಸಹಾಯ ನೀಡಿದ್ದು ಅನುದಾನ ಬಿಡುಗಡೆ ಮಾಡಿದ್ದು ಜೊತೆಗೆ ಕಾರ್ಮಿಕರ ಶೃದ್ಧೆ ಹಾಗೂ ಪ್ರಾಮಾಣಿಕ ಕಾರ್ಯ ಈ ಪ್ರಶ್ತಿ ಬರುವಂತೆ ಮಾಡಿದೆ ತುಂಬ ಸಂತೋಷವಾಗಿದೆ”
“ಸ್ವಾತಿ ಕುಲಕರ್ಣಿ
ಅಧ್ಯಕ್ಷರು ನಗರಸಭೆ ಮುಧೋಳ