ಜಮಖಂಡಿ

ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆ

ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆ
ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ತಾಲೂಕಿನ ಬಂಡಿಗಣಿ ನೀಲಮಾಣಿಕ ಮಠದ ಬಸವಗೋಪಾಲ ಶ್ರೀಗಳನ್ನು ಭಕ್ತರು ಸಂಭ್ರಮದಿಂದ ಸ್ವಾಗ

ಜಮಖಂಡಿ14: ಬೆಳಗಾವಿ ಜಿಲ್ಲೆ ಕನ್ಯಾಳ ಗ್ರಾಮದ ಆರಂಭಗೊಂಡಿರುವ ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆಯಲ್ಲಿ ಹಿಂದು-ಮುಸ್ಲಿಂ ಸಹಿತ ವಿವಿಧ ಧರ್ಮದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ತಾಲೂಕಿನ ಬಂಡಿಗಣಿ ನೀಲಮಾಣಿಕ ಮಠದ ಬಸವಗೋಪಾಲ ಶ್ರೀಗಳು ಮಾತನಾಡಿ, ಲೋಕಕಲ್ಯಾಣಕ್ಕಾಗಿ ಸತತ ಹಲವು ದಶಕಗಳಿಂದ ಭಕ್ತರ ಪಾದಯಾತ್ರೆ ನಡೆಯುತ್ತಿದೆ. ಮಾನವ ಧರ್ಮ ಜಾಗೃತಿಗಾಗಿ, ವಿಶ್ವ ಶಾಂತಿಗಾಗಿ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ತಾಲೂಕಿನ ಬಂಡಿಗಣಿ ನೀಲಮಾಣಿಕ ಮಠದ ಬಸವಗೋಪಾಲ ಶ್ರೀಗಳನ್ನು ಭಕ್ತರು ಸಂಭ್ರಮದಿಂದ ಸ್ವಾಗತಿಸುವ ಮೂಲಕ ಪುಷ್ಪಗಳ ಸುರಿಮಳೆಗೈದರು. ಪಾದಯಾತ್ರೆಯಲ್ಲಿ ಸಾವಿರಾರುಭಕ್ತರು ಜಯಘೋಷಗಳೊಂದಿಗೆ ತಾಲೂಕಿನ ಬಂಡಿಗಣಿ ಸುಕ್ಷೇತ್ರಕ್ಕೆ ತೆರಳಿಸಿದರು.


ಸುದ್ದಿ ಓದಿ