ತಂಜಾವೂರು ವಾಯು ಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ
ತಂಜಾವೂರು, ಜ 20, ಭಾರತೀಯ ರಕ್ಷಣಾ ಸನ್ನದ್ಧತೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಾರ್ಯಾಚರಣೆ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೋಮವಾರ ಸೇರ್ಪಡೆಗೊಳಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿ ಒಳಗೊಂಡ ಸುಖೋಯ್-30 ಎಂಕೆಐ ಯುದ್ಧವಿಮಾನವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು. ಕೊಯಮತ್ತೂರಿನ ಸೂಲೂರ್ ವಾಯುಪಡೆ ನೆಲೆಗೆ ಮುನ್ನೆಲೆಯ ಯುದ್ಧವಿಮಾನ ಈಗಾಗಲೇ ಸೇರ್ಪಡೆಗೊಂಡಿದ್ದು, ಇಂದು ಸೇರ್ಪಡೆಯಾದ ಯುದ್ಧವಿಮಾನ ದಕ್ಷಿಣ ಭಾರತದ ಮುನ್ನೆಲೆಯ ಎರಡನೇ ಯುದ್ಧವಿಮಾನವಾಗಿದೆ. ತಂಜಾವೂರು, ದಕ್ಷಿಣ ವಾಯು ಕಮಾಂಡ್ ನ ಸುಖೋಯ್-30 ಯುದ್ಧವಿಮಾನವನ್ನು ಪಡೆದ ಮೊದಲ ಕೇಂದ್ರವೆನಿಸಿದೆ. 2013ರ ಮೇ 27ರಂದು ತಂಜಾವೂರು ವಾಯು ಪಡೆ ಕೇಂದ್ರವನ್ನು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಹಿಂದೂ ಮಹಾಸಾಗರ ಪ್ರದೇಶದ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಆರ್ಥಿಕ ಹಿತಾಸಕ್ತಿ ಮತ್ತು ಆಸ್ತಿಗಳನ್ನು ರಕ್ಷಿಸುವುದಕ್ಕಾಗಿ ಈ ಕೇಂದ್ರ ಸ್ಥಾಪಿಸಲಾಗಿದೆ. ತಂಜಾವೂರು ಮತ್ತು ಕೊಯಮತ್ತೂರು ಕೇಂದ್ರಗಳ ಸ್ಥಾಪನೆಗಳಿಂದ ದಕ್ಷಿಣ ಭಾಗದಲ್ಲಿ ಭಾರತೀಯ ವಾಯುಪಡೆಯ ಕಾರ್ಯಾಚರಣೆ ಸಾಮಥ್ರ್ಯ ಗಣನೀಯವಾಗಿ ವೃದ್ಧಿಯಾಗಲಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 