100ದಿನಗಳ ಒಳಗೆ ಮುಕ್ತಾಯಗೊಂಡ ಕಬ್ಬು ನುರಿಸುವ ಹಂಗಾಮ
Sugarcane harvesting season ends within 100 days
ಸಂಬರಗಿ 13: 2025-26ನೇ ಕಬ್ಬು ನಡೆಸುವ ಹಂಗಾಮ 100ದಿನಗಳ ಒಳಗೆ ಮುಕ್ತಾಯಗೊಂಡಿದ್ದು, ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಾಡುವ ಕೂಲಿಗಾರರು ಮಹಾರಾಷ್ಟದ ವಿವಿಧ ಜಿಲ್ಲೆಗಳಿಗೆ ತೆರಳಿದ್ದು, ಕಾರ್ಖಾನೆಯಿಂದ ಪಡೆದುಕೊಂಡ ಮುಂಗಡ ಹಣವು ಇನ್ನೂ ಮುಟ್ಟಿಲ್ಲ. 2026-27ನೇ ಹಂಗಾಮಿನ ಕರಾರು ಮಾಡಿ ಹೋಗುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕು ಸಕ್ಕರೆ ನಾಡಿನ ತಾಲೂಕು ಇದ್ದು, ಕಳೆದ 30 ವರ್ಷಗಳ ಹಿಂದೆ ಕಾರ್ಖಾನೆಗಳು ನವ್ಹೇಂಬರ ತಿಂಗಳಲ್ಲಿ ಶುರುಮಾಡಿ ಮೇ ತಿಂಗಳವರೆಗೆ ನಡೆಯುತ್ತಿತ್ತು. 2001 ರಿಂದ ಅಥಣಿ ತಾಲೂಕಿನಲ್ಲಿ 7 ಕಾರ್ಖಾನೆ ಇದ್ದು, ಕಾರ್ಖಾನೆ ಪ್ರಮಾಣ ಹೆಚ್ಚಾಯಿತು. ಕಬ್ಬಿನ ಪ್ರಮಾಣ ಕಡಿಮೆ ಆಯಿತು. ಆ ಕಾರಣ ಕಬ್ಬು ನಡೆಸುವ ಹಂಗಾಮವು ಮುಕ್ತಾಯಗೊಂಡಿದೆ. 1995 ರಲ್ಲಿ ತಾಲೂಕಿನಲ್ಲಿ ಒಂದೇ ಕಾರ್ಖಾನೆ ಇದ್ದು, ಮೇ ತಿಂಗಳ ಕೊನೆಯವರೆಗೆ ಕಬ್ಬಿನ ಹಂಗಾಮ ನಡೆಯುತ್ತಿತ್ತು. ಕಾರ್ಖಾನೆ ಹೆಚ್ಚಾದ ಕಾರಣ ಕಬ್ಬು ಮುಕ್ತಾಯಗೊಂಡಿದೆ.
ಸಕ್ಕರೆ ಕಾರ್ಖಾನೆಯ ಮಾಲೀಕರು ಕಬ್ಬು ಕಟಾವು ಮಾಡುವ ವಾಹನ ಹಾಗೂ ಕೂಲಿಕಾರರು ಬೀಡ ಜಾಲನಾ, ಅಮರಾವತಿ, ಬೊರಡಾನಾ, ಸೋಲಾಪೂರ ಜಿಲ್ಲೆಯಿಂದ ಕೂಲಿಗಾರರಿಗೆ ಮುಂಗಡ ಹಣ ಕೊಟ್ಟು ಕಬ್ಬು ಕಟಾವು ಮಾಡಲು ಕರೆದುಕೊಂಡು ಬರುತ್ತಿದ್ದಾರೆ. ಹಂಗಾಮ ಮುಕ್ತಾಯಗೊಂಡ ನಂತರ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾರೆ. ರೈತರು ಕಬ್ಬಿನ ದರಕ್ಕಾಗಿ ಹೋರಾಟ ಮಾಡಿದರೂ ಸಹ 120 ದಿನಗಳ ಒಳಗೆ ಹಂಗಾಮವನ್ನು ಮುಕ್ತಾಯಗೊಳಿಸಿ ಹೋಗುತ್ತಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 