ಕುಕನೂರ್

ಎಂಟು ತಿಂಗಳಿಂದ ನಡೆಯದ ಸಾಮಾನ್ಯ ಸಭೆ: ಕುಂಠಿತಗೊಂಡ ಗ್ರಾಮ ಅಭಿವೃದ್ಧಿ

ಎಂಟು ತಿಂಗಳಿಂದ ನಡೆಯದ ಸಾಮಾನ್ಯ ಸಭೆ: ಕುಂಠಿತಗೊಂಡ ಗ್ರಾಮ ಅಭಿವೃದ್ಧಿ

ಕುಕನೂರು  :  ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 8 ತಿಂಗಳ ಗಳಿಂದ ಸಾಮಾನ್ಯ ಸಭೆ ಜರುಗದೆ ಗ್ರಾಮದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿರುವುದಕ್ಕೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯಾಲಯ ಸಾಕ್ಷಿಯಾಗಿದೆ.           ಗ್ರಾಮದ ಅಭಿವೃದ್ಧಿಗಾಗಿ,ಪಂಚಾಯ್ತಿ ಕಾರ್ಯಾ ಲಯದ ಲೆಕ್ಕಪತ್ರ ಪರಿಶೀಲನೆಗಾಗಿ ಮತ್ತು ಕ್ರಿಯಾ ಯೋಜನೆ ರಚನ ಸೇರಿದಂತೆ ನಮಗೆ ಸಂಬಂಧಪಟ್ಟ ಚರ್ಚೆ  ಹಾಗೂ ನಿರ್ಣಯಗಳ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಕಾರ್ಯಾ ಲಯದಲ್ಲಿ ತಿಂಗಳಿಗೊಂದು ಬಾರಿ ಸಾಮಾನ್ಯ ಸಭೆ ಜರುಗುವುದು ಸಹಜವಾದ ಪ್ರಕ್ರಿಯೆಯಾಗಿದ್ದು ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯಾ ಲಯ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ.       

 2022ರ ಅಗಸ್ಟ್ ತಿಂಗಳಿಂದ ಗ್ರಾಮ ಪಂಚಾಯತಿ ಕಾರ್ಯಾ ಲಯದಲ್ಲಿ ಯಾವುದೇ ಸಾಮಾನ್ಯ ಸಭೆ ಜರುಗಿರುವುದಿಲ್ಲ ಅಕ್ಟೋಬರ್ ತಿಂಗಳಲ್ಲಿ ಸಭೆಗೆ ನೋಟಿಸ್ ನೀಡಿದ್ದರಾದರೂ ಸಭೆಗೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಜರಾಗದ ಕಾರಣದಿಂದ ಸಭೆಯನ್ನು ಮುಂದೂಡಲಾಗಿದ್ದು ಇಲ್ಲಿಯ ತನಕ ಗ್ರಾಮ ಪಂಚಾಯಿತಿ ಕಾಯರ್ಾಲಯದಲ್ಲಿ ಸಾಮಾನ್ಯ ಸಭೆ ನಡೆಯದೇ ಇದ್ದು ಗ್ರಾಮದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದರೆ ತಪ್ಪಾಗಲಾರದು.       

  ಸಾಮಾನ್ಯ ಸಭೆ ನಡೆಯದೇ ಇರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಸಹ ಇಲ್ಲದೆ ಗ್ರಾಮದ ಜನತೆ ಪರದಾಡುವ ಪರಿಸ್ಥಿತಿ ನಿಮರ್ಾಣವಾಗಿದೆ.     

     ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಗ್ರಾಮದಲ್ಲಿ ಬೀದಿ ದೀಪಗಳು ಸಹ ಅರ್ಧಂಬರ್ಧ ಬೆಳಗುತ್ತಿದ್ದು ಉಳಿದಂತ ಗ್ರಾಮದ ಪ್ರದೇಶ ಕತ್ತಲಿನಲ್ಲಿ ಜನಕಾರ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ, ಇನ್ನು ಸಾಮಾನ್ಯ ಸಭೆ ನಡೆದೇ ಇದು ಇರುವುದರಿಂದ ಗ್ರಾಮದ ನೈಬಲಿಕರಣ ನಡೆಯುವುದಾದರೂ ಹೇಗೆ ಈ ದೃಷ್ಟಿಯಿಂದ ನೋಡೋದಾದರೆ ಗ್ರಾಮದ ಚರಂಡಿ ಸೇರಿದಂತೆ ಇನ್ನಿತರ ಶುಚಿತ್ವ ಮಾಡಬೇಕಾದ ಕಾರ್ಯಗಳು ನೆನಪಿದೆಗೆ ಬಿದ್ದು ಗ್ರಾಮದಲ್ಲಿ ನೈರ್ಮಲ್ಯ ವೆಂಬುದೇ ಇಲ್ಲದಂತಾಗಿ ರೋಗ ರಜನಿಗಳಿಗೆ ಆಹ್ವಾನ ನೀಡುವ ವಾತಾವರಣ ನಿರ್ಮಾ ಣಗೊಂಡಿರುತ್ತದೆ.    

   ಗ್ರಾಮದ ಸಮಸ್ಯೆಗಳ ಕುರಿತು ಈಗಾಗಲೇ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮದ ಗ್ರಾಮ ಪಂಚಾಯತಿ ಕಾಯರ್ಾಲಯದಲ್ಲಿ ಜನರಿಗೆ ಸೇವೆ ನೀಡಬೇಕಾದ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಾಯರ್ಾಲಯಕ್ಕೆ ಆಗಮಿಸದೆ ವಾರದಲ್ಲಿ ಒಂದು ಅಥವಾ ಎರಡು ಬಾರಿ ಆಗಮಿಸುತ್ತಾ ಇದು ಅದು ಕೂಡ ಗಂಟೆ ಅಥವಾ 2 ಗಂಟೆ ಒಳಗೆ ಕಾಯರ್ಾಲಯದಿಂದ ಕಾಲ್ ಕಿತ್ತಿರುತ್ತಾರೆ ಎಂದು ಹೆಸರು ಹೇಳದ ಗ್ರಾಮದ ಯುವಕ ಆರೋಪ ಮಾಡಿರುತ್ತಾರೆ 

ಸುದ್ದಿ ಓದಿ