ಮುಧೋಳ

ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಪಡೆದುಕೊಳ್ಳಬೇಕು :ನಿವೃತ್ತ ಡಿಡಿಪಿಐ ಎಂ.ಜಿ.ದಾಸರ

ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಪಡೆದುಕೊಳ್ಳಬೇಕು :ನಿವೃತ್ತ ಡಿಡಿಪಿಐ ಎಂ.ಜಿ.ದಾಸರ

ಮುಧೋಳ:ಎಸ್‌.ಎಸ್‌.ಎಲ್‌.ಸಿ ಜೀವನದ ಮೊದಲ ಮೆಟ್ಟಿಲಾಗಿದ್ದು ಅದನ್ನು ಜಾಗೃತವಾಗಿ ಹತ್ತಬೇಕು,ವಿದ್ಯಾರ್ಥಿಗಳು ಕೇವಲ ಅಂಕಗಳಿಸುವ ಯಂತ್ರಗಳಾಗದೆ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಪಡೆದುಕೊಳ್ಳಬೇಕು ಎಂದು ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಹೇಳಿದರು. 

ಭಾನುವಾರ ತಾಲ್ಲೂಕಿನ ಮಿರ್ಜಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮ   'ದೀಕಾ'್ಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ಕಾರಿ ಶಾಲೆಗಳಲ್ಲಿ ಹಲವಾರು ರೀತಿಯಲ್ಲಿ ಸೌಲಭ್ಯಗಳಿದ್ದು  ಆ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಅತ್ಯುತ್ತಮ ಅಂಕ ಪಡೆದು ಬದಕಿನ ಮೊದಲ ಯಶಸ್ಸನ್ನು ಖುಷಿಯಿಂದ ಹಂಚಿಕೊಳ್ಳಬೇಕು ಈ ಕಾರ್ಯ ಕೇವಲ ವಿದ್ಯಾರ್ಥಿ ಶಿಕ್ಷಕರಿಂದ ಮಾತ್ರ ಆಗದು ಇದಕ್ಕೆ ಹೆತ್ತವರ ಅಥವಾ ಪೋಷಕರ ಸಹಕಾರ ಅತ್ಯಗತ್ಯವಾಗಿದೆ.ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣ ಕೊಟ್ಟರೂ ಸಹ ಮನೆಯಲ್ಲಿ ವಿವಿದ ಕೆಲಸಕ್ಕೆ ತೊಡಗಿಕೊಳ್ಳುವಂತೆ ಒತ್ತಾಯಪೂರ್ವಕವಾಗಿ ಹೇಳದೆ ಅವರ ಓದಿಗೆ ಸಹಕಾರ ನೀಡಿದರೆ ಗ್ರಾಮೀಣ ಪ್ರದೇಶದಲ್ಲಿ ಓದುವ ವಿದ್ಯಾರ್ಥಿಗಳು ರಾಷ್ಟ್ರದ ಅತ್ಯುತ್ತಮ ಹುದ್ದೆಯಲ್ಲಿ ಕುಳಿತುಕೊಳ್ಳಬಹುದಾಗಿದೆ ಈ ನಿಟ್ಟಿನಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಬೆಸೆಯುವ ಕಾರ್ಯಕ್ರಮ ಮೆಚ್ಚುವಂತಹದು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಗತಿಪರ ರೈತ ಆರ್‌.ಕೆ.ಮಳಲಿ,ಗ್ರಾಮ ಪಂಚಾಯತಿ ಸದಸ್ಯ ಯಲ್ಲಪ್ಪ ಲೋಗಾಂವಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿದ್ದು ಅವುಗಳನ್ನು ಸೂಕ್ತ ರೀತಿಯಲ್ಲಿ ಸದೂಪಯೋಗಪಡಿಸಿಕೊಂಡರೆ ಬದಕನ್ನು ಖುಷಿಯಿಂದ ಕಟ್ಟಿಕೊಳ್ಳಬಹುದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹೇಳಿದ ಕಾರ್ಯ ಚಟುವಟಿಕೆಗಳನ್ನು ಸೂಕ್ತ ರೀತಿಯಲ್ಲಿ ಮಾಡಿ ಗ್ರಾಮಕ್ಕೆ ಹೆತ್ತವರಿಗೆ ಹೆಸರು ತನ್ನಿ ಎಂದು ಹೇಳಿದರು. 

ಮುಖ್ಯೋಪಾಧ್ಯಾಯ ಜಿ.ಎಸ್‌.ಹಂಚನಾಳ ಮಾತನಾಡಿ ದೀಕ್ಷಾ ಕಾರ್ಯಕ್ರಮ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಫಲಿತಾಂಶ ಸುಧಾರಣೆ ಮಾಡುವ ವಿನೂತನ ಕಾರ್ಯಕ್ರಮವಾಗಿದ್ದು ಇದಕ್ಕೆ ಶಿಕ್ಷಕರಿಗೆ ಪಾಲಕರು ಸಹಕಾರ ನೀಡಿ ಶೇ 100 ಫಲಿತಾಂಶಕ್ಕೆ ಕೈಜೋಡಿಸಿ ಎಂದು ಹೇಳಿದರು. 

ರಾಮನಗೌಡ ಪಾಟೀಲ,ರಾಮಣ್ಣ ತಟ್ಟಿಮನಿ,ಬಿ.ಆರ್‌.ಲೋಗಾಂವಿ,ಮುಖ್ಯೋಪಾಧ್ಯಾಯ ಜಿ.ಎಸ್‌.ಹಂಚನಾಳ ಎಂ.ಆರ್,ಬೆಟಗೇರಿ ಹಾಗೂ ಸಿಬ್ಬಂದಿ ವರ್ಗ,ಎಸ್‌.ಡಿ.ಎಂ.ಸಿ ಸದಸ್ಯರು ಇದ್ದರು.ಇದೇ ಸಂದರ್ಭದಲ್ಲಿ ವಾರ್ಗಾವಣೆ ಹೊಂದಿದ ಯು.ಬಿ.ಶಿರಗಾಂವಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಪಿಕೆಪಿಎಸ್ ಅಧ್ಯಕ್ಷರು ಹಾಗೂ ಸಆಧಕರನ್ನು ಸನ್ಮಾನಿಸಲಾಯಿತು. 


ಸುದ್ದಿ ಓದಿ