ಕಷ್ಟ ಕಾರ​‍್ಪಣಯಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು ; ನಾಡೋಜ ಜಗದೀಶ ಗುಡಗುಂಟಿ ಕರೆ

ಕಷ್ಟ ಕಾರ​‍್ಪಣಯಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು ; ನಾಡೋಜ ಜಗದೀಶ ಗುಡಗುಂಟಿ ಕರೆ Students should pursue their education despite facing hardships; Nadoja Jagadish Gudagunti calls

ಲೋಕದರ್ಶನ ವರದಿ 

ವಿಜಯಪುರ 01 : ವಿದ್ಯಾರ್ಥಿಗಳು ಎಲ್ಲ ಕಷ್ಟ ಕಾರ​‍್ಪಣಯಗಳನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡಬೇಕು ಎಂದು ಜಮಖಂಡಿಯ ಮತಕ್ಷೇತ್ರದ ಶಾಸಕರಾದ ನಾಡೋಜ ಶ್ರೀ ಜಗದೀಶ್ ಗುಡಗುಂಟಿ ಹೇಳಿದರು. ಅವರು ನಗರದ ಬೆಂಡಿಗೇರಿ ಗಲ್ಲಿಯಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭೆ (ರಿ) ಜಿಲ್ಲಾ ಘಟಕ ವಿಜಯಪುರ ಪದಾಧಿಕಾರಿಗಳಿಂದ ಎಸ್‌.ಎಸ್‌.ಎಲ್‌.ಸಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ನಾನು ಬಡ ಕುಟುಂಬದಿಂದಲೇ ಬಂದವನು. ಪ್ರತಿ ವಾರಕ್ಕೊಮ್ಮೆ ಪ್ರತಿಯೊಬ್ಬರ ಮನೆಯಲ್ಲಿ ಊಟ ಮಾಡಿ ವಿದ್ಯಾಭ್ಯಾಸ ಮಾಡಿರುವೆ. ಬಡತನದ ಅರಿವು ನನಗಿದೆ. ಆದ್ದರಿಂದ ವಿದ್ಯಾರ್ಥಿಗಳು ಎಲ್ಲ ಕಷ್ಟ, ಕಾರ​‍್ಪಣಯಗಳನ್ನು ಎದುರಿಸಿ ವಿದ್ಯಾಭ್ಯಾಸ ಮಾಡಬೇಕು ನಾನು ಕಷ್ಟಪಟ್ಟಿದ್ದರಿಂದಲೇ ಇಂದು ಫ್ಯಾಕ್ಟರಿ ಮಾಡಲು ಹಾಗೂ ಬ್ಯಾಂಕ್ ಸ್ಕೂಲ್ ಕಾಲೇಜ್ ಮಾಡಲು ಸಾಧ್ಯವಾಯಿತು. ಬಡ ಜಂಗಮರಿಗೆ ಸಹಾಯ ಸಹಕಾರ ಪ್ರತಿಯೊಬ್ಬರು ನೀಡಬೇಕು. ಜಂಗಮ ವೃತ್ತಿ ಶ್ರೇಷ್ಠವಾದದ್ದು ಅದಕ್ಕೆ ತಕ್ಕಂತೆ ನಮ್ಮ ನಡುವಳಿಕೆಗಳು ಇರಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಜಂಗಮ ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡುವ ಪುರಸ್ಕಾರಕ್ಕೆ ವಯಕ್ತಿಕವಾಗಿ ಎರಡು ಲಕ್ಷ ರೂಪಾಯಿಗಳನ್ನು ನೀಡಿ,

ಆ ದುಡ್ಡಿನಿಂದ ಬರುವ ಬಡ್ಡಿ ಹಣವನ್ನು ಪುರಸ್ಕಾರದ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಸಾನಿಧ್ಯವನ್ನು ವಹಿಸಿದ್ದ ನಾಗಠಾಣ ಉದಯೇಶ್ವರ ಮಠದ ಷಟಸ್ಥಳ ಬ್ರಹ್ಮ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ವಿಜಯಪುರ ಜಿಲ್ಲೆಯಲ್ಲಿಯೇ ಜಂಗಮರು ಹೆಚ್ಚಿದ್ದಾರೆ. ಆದರೆ ಈ ಜಿಲ್ಲೆಯ ಜಂಗಮರಲ್ಲಿ ಒಗ್ಗಟ್ಟಿಲ್ಲ. ಇದು ಪ್ರತಿಯೊಬ್ಬ ಜಂಗಮನಲ್ಲಿ ಸ್ವ ಪ್ರತಿಷ್ಠೆ ಮನೆ ಮಾಡಿದೆ. ಅದನ್ನು ಬಿಟ್ಟು ಜಂಗಮ ನಾಯಕರೆಲ್ಲ ಒಂದಾಗಿ ಬಡ ಜಂಗಮರ ಸಲುವಾಗಿ ದುಡಿಯಬೇಕು ಎಂದು ಕರೆ ನೀಡಿದರು. 

ತಡವಲಗಾದ ರಾಚೋಟೇಶ್ವರ ಹಿರೇಮಠದ ಶ್ರೀಷ ಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಜಿಲ್ಲಾ ಸಂಘವು ಇದೇ ರೀತಿ ಜಂಗಮರಿಗಾಗಿ ದುಡಿಯಬೇಕು ಇನ್ನೂ ಹೆಚ್ಚಿನ ಜಿಲ್ಲೆಯಲ್ಲಿ ಸಂಘಟನೆಯಾಗಬೇಕು ಎಂದು ತಿಳಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಕೆ ಸಾವಳಗಿಮಠ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹನೀಯರನ್ನು ಸ್ವಾಗತಿಸಿ, ಪ್ರಸ್ತಾವನೆಯಲ್ಲಿ ಶಾಸಕರನ್ನು ಉದ್ದೇಶಿಸಿ ಮುಂದಿನ ಅಧಿವೇಶನದಲ್ಲಿ ಶಾಸಕರು ಜಂಗಮರ ಅಭಿವೃದ್ಧಿ ನಿಗಮಕ್ಕೆ ಹಾಗೂ ಜಂಗಮ ಸಮುದಾಯ ಭವನಗಳನ್ನು ಪ್ರತಿ ತಾಲೂಕ ಜಿಲ್ಲಾಮಟ್ಟದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಬೇಕೆಂದು ಮನವಿ ಮಾಡಿಕೊಂಡರು.  ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 55 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರಥಮ ಸ್ಥಾನ ಪಡೆದ ಕುಮಾರಿ ಭಾಗ್ಯಲಕ್ಷ್ಮಿ ಹಿರೇಮಠ, ದ್ವಿತೀಯ ಸ್ಥಾನ ಪಡೆದ ಐಶ್ವರ್ಯ ಮಠಪತಿ, ತೃತೀಯ ಸ್ಥಾನ ಪಡೆದ ಅರವಿಂದ ಸ್ವಾಮಿ ಶಿವಯೋಗಿ ಮಠ  ಈ ಎಲ್ಲ ಮಕ್ಕಳಿಗೆ ನಗದು ಹಣ ನೀಡಲಾಯಿತು. ಅದರಂತೆ ಪಿಯುಸಿಯಲ್ಲಿ ಪ್ರಥಮ ಸ್ಥಾನವನ್ನು ಅಭಿಷೇಕ್ ಹಿರೇಮಠ್, ದ್ವಿತೀಯ ಸ್ಥಾನವನ್ನು ನಂದಿತಾ ಪ್ರಭು ಕಂದಗಲ್, ತೃತಿಯ ಸ್ಥಾನವನ್ನು ಗೌರಿ ಸಂಗಮ ಸಾಧಕ ವಿದ್ಯಾರ್ಥಿಗಳಿಗೆ ನಗದು ಹಣ ನೀಡಿ ಗೌರವಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂಜೀವ್ ಹಿರೇಮಠ ವಹಿಸಿದ್ದರು. ಸಭೆಯಲ್ಲಿ ಕಾರ್ಯಕ್ರಮದ ಪೋಷಕ ದಾನಿಗಳಾದ ಎಸ್‌.ಎ.ಹಿರೇಮಠ, ಗೌರವಾಧ್ಯಕ್ಷರಾದ ಎಸ್ ಎಲ್ ನಿಂಬರಗಿಮಠ ವಕೀಲರು, ಕಾರ್ಯಾಧ್ಯಕ್ಷರಾದ ಎನ್ ಆರ್ ಮಠ, ಹಿರಿಯರಾದ ಶ್ರೀ ಎಸ್ ಎಸ್ ಹಿರೇಮಠ, ಬಸಯ್ಯ ಚಿನ್ಕಾಳಿಮಠ, ಡಾಕ್ಟರ್ ಪ್ರಸಾದ್ ವಸ್ತ್ರದ, ಬಸವರಾಜ್ ನಂದಿಕೋಲಮಠ, ಗುರಯ್ಯ ಯಾದವಾಡಮಠ, ರಾಚಯ್ಯ ಚೌಕಿಮಠ, ರಾಚಯ್ಯ ಮಠಪತಿ, ಗುರು ಸಿದ್ದಯ್ಯ ಹಿರೇಮಠ, ನಂಜುಂಡಿ ಮಠಪತಿ, ಶ್ರೀ ಬಿ ಐ ಹಿರೇಮಠ, ಮಲ್ಲಯ್ಯ ಹಿರೇಮಠ, ಆರ್ ಜಿ ಮಠಪತಿ ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾಕ್ಟರ್ ಪ್ರಸಾದ್ ವಸ್ತ್ರದವರು ವಂದಿಸಿದರು.