ವಿದ್ಯಾರ್ಥಿ ಕು. ಸಾಯಿಗಣೇಶ ಮಡಿವಾಳಗೆ ರಾಷ್ಟ್ರಮಟ್ಟದ ಪ್ರಶಸ್ತಿ
Student Ms. Saiganesh Madiwala receives national level award
ವಿದ್ಯಾರ್ಥಿ ಕು. ಸಾಯಿಗಣೇಶ ಮಡಿವಾಳಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಕಾರವಾರ 13: “ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ” “ಋಖಕಋಇ-ಒಂಓಂಏ” ಇವರು ಆಯೋಜಿಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರೇರಿತ ಸಂಶೋಧನಾ ಪುರಸ್ಕಾರದಡಿಯಲ್ಲಿ ಮಕ್ಕಳಲ್ಲಿ ವಿಜ್ಞಾನದ ಹೊಸತನವನ್ನು ಹುರಿದುಂಬಿಸುವ ರಾಷ್ಟ್ರಮಟ್ಟದ “ಇನ್ಸ್‌ಪಾಯರ್ ಅವಾರ್ಡ್: 2024-25” ಗೆ ಬಾಲಮಂದಿರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕು. ಸಾಯಿಗಣೇಶ ರತ್ನಾಕರ ಮಡಿವಾಳ ಇವನು ಸಿದ್ಧಪಡಿಸಿದ “ಸ್ಮಾರ್ಟ್ ಪ್ಯಾನ್ ಪ್ರಾಜೆಕ್ಟ್” ಇದು ಆಯ್ಕೆಯಾಗಿರುತ್ತದೆ. ಈ “ಇನ್ಸ್‌ಪಾಯರ್ ಅವಾರ್ಡ್” ಎಂಬುದು ವಿಜ್ಞಾನ ಮತ್ತು ತಾಂತ್ರಿಕದಲ್ಲಿನ ಸೃಜನಶೀಲತೆಯನ್ನು ಉತ್ತೇಜಿಸಲು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ “ಋಖಕಋಇ” ಯೋಜನೆಯ ಅಂಗವಾಗಿ ನಡೆದುಕೊಂಡು ಹೋಗುವ ಒಂದು ರಾಷ್ಟ್ರಮಟ್ಟದ ಪಠ್ಯಾಧಾರಿತ ಕಾರ್ಯಕ್ರಮವಾಗಿದೆ. ಅದು ಶಾಲಾ ಮಕ್ಕಳಿಂದ ಒಂದೊಂದು ನವೀನ ರೀತಿಯ ವಿಜ್ಞಾನ ಆವಿಷ್ಕಾರಗಳ ಪರಿಕಲ್ಪನೆಗಳನ್ನು ಆಯ್ಕೆಮಾಡಿ, ಪ್ರಶಸ್ತಿಗಳನ್ನು ನೀಡುತ್ತಿದೆ. ಅದೇ ರೀತಿ 2024-25ನೇ ಸಾಲಿನಲ್ಲಿ ಬಾಲಮಂದಿರ ಪ್ರೌಢಶಾಲೆಯಿಂದ ಐದು ವಿದ್ಯಾರ್ಥಿಗಳ ಪ್ರಾಜೆಕ್ಟ್‌ನ್ನು ಆನ್‌ಲೈನ್‌ನಲ್ಲಿ ಕಳುಹಿಸಲಾಗಿತ್ತು. ಅದರಲ್ಲಿ ಕು. ಸಾಯಿಗಣೇಶ ರತ್ನಾಕರ ಮಡಿವಾಳ ಸಲ್ಲಿಸಿದ “ಸ್ಮಾರ್ಟ್ ಪ್ಯಾನ್” ಪ್ರಾಜೆಕ್ಟ್ ಆಯ್ಕೆಯಾಗಿರುತ್ತದೆ. ಇವನ ಈ ಸಾಧನೆಗೆ ಕಾರವಾರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಸ್. ಪಿ. ಕಾಮತ್, ಉಪಾಧ್ಯಕ್ಷರಾದ ಅನಿರುದ್ಧ ಹಳದಿಪುರ ಹಾಗೂ ಆಡಳಿತಾಧಿಕಾರಿ ಜಿ. ಪಿ. ಕಾಮತ ಮತ್ತು ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಅಭಿನಂದಿಸಿರುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 