ರಾಜ್ಯಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿ
ಮುಧೋಳ : ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವತಿಯಿಂದ ಜ್ಯೂನಿಯರ್ ಬಾಲಕ ಹಾಗು ಬಾಲಕಿಯರ ರಾಜ್ಯ ಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿ ರನ್ನ ಹ್ಯಾಂಡಬಾಲ್ ವೈಭವ -2021 ನಗರದ ಲೋಕಾಪೂರ ರಸ್ತೆಯಲ್ಲಿ ಕವಿಚಕ್ರವರ್ತಿ ರನ್ನ ತಾಲ್ಲೂಕಾ ಕ್ರೀಡಾಂಗಣದಲ್ಲಿ ನ. 19 ಹಾಗೂ 20 ರಂದು ಎರಡು ದಿನಗಳ ಕಾಲ ನಡೆಯಲಿದೆ. ಉದ್ಘಾಟನೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನೆರವೇರಿಸುವರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಬಿ.ಎಲ್.ಲೋಕೇಶ ನೆರವೆರಿಸುವರು. ಯುವ ಧುರೀಣರು ಅರುಣ ಕಾರಜೋಳ, ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ಪ್ರಕಾಶ ನರಗಟ್ಟಿ, ತಹಸೀಲ್ದಾರ ಸಂಗಮೇಶ ಬಾಡಗಿ,ಸಿಪಿಐ ಎಚ್.ಆರ್.ಪಾಟೀಲ, ಬಿ.ಆರ್.ಬಕ್ಷಿ, ತಾಪಂ ಇಓ ಕಿರಣ ಘೋರೆ್ಡ, ಶಿರಡಿ ಸಾಯಿ ಶಿಕ್ಷಣ ಸಂಸ್ಥೆ ರಾಜೇಶ ವಾಲಿ,ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಕೆ.ಜಿ.ಮಾದಪ್ಪ, ಡಾ.ರಾಘವೇಂದ್ರ ಜಿ,ಗೌರವ ಜಿಲ್ಲಾಧ್ಯಕ್ಷ ಕಲ್ಲಪ್ಪ ಮಾನೆ,ಜಿಲ್ಲಾಧ್ಯಕ್ಷ ವಿ.ಡಿ.ಮೇತ್ರಿ ಜಿಲ್ಲಾ ಕಾರ್ಯದರ್ಶಿ ಎ.ಎಂ.ಪರೀಟ ಉಪಸ್ಥಿತರಿರುವರು.
ಬಹುಮಾನ ವಿತರಣೆ: ರಾಜ್ಯಮಟ್ಟದ ಬಾಲಕಹಾಗೂ ಬಾಲಕಿಯರ ರನ್ನ ಹ್ಯಾಂಡಬಾಲ್ ವೈಭವ ಬಹುಮಾನವಿತರಣಾ ಕಾರ್ಯಕ್ರಮ ನ. 21ರಂದು ಸಂಜೆ 7ಕ್ಕೆ ನಗರದ ಲೋಕಾಪೂರ ರಸ್ತೆಯಲ್ಲಿ ಕವಿಚಕ್ರವರ್ತಿ ರನ್ನ ತಾಲೂಕಾ ಕ್ರೀಡಾಂಗಣದಲ್ಲಿ ಜರುಗುವುದು. ಅಧ್ಯಕ್ಷತೆ ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ರಾಜ್ಯ ಗೌರವ ಅಧ್ಯಕ್ಷ ಡಾ.ಮನೋಜ ಸಾಹುಕಾರ, ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಬಿ.ಎಲ್.ಲೋಕೇಶ,ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ಖಜಾಂಚಿ ಪ್ರಕಾಶ ನರಗಟ್ಟಿ,ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಕೆ.ಎಚ್.ಶಿವರಾಮ, ಡಾ.ಎನ್.ಬಿ.ಮುನ್ನೋಳ್ಳಿ, ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ವಿನೋದ ಎಸ್, ತಾಲೂಕಾ ದೈಹಿಕ ಶಿಕ್ಷಕರ ಸಂಘದ ಆಧ್ಯಕ್ಷ ಬಿ.ವೈ.ಕಂದಗನೂರ, ಅರಳಿಕಟ್ಟಿ ಫೌಂಡೇಶನ್ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ, ನಾರಾಯಣ ನಾಯಕ,ಗೋಪಾಲ ದಾಸರಡ್ಡಿ, ಶ್ರೀಶೈಲ ನೀಲಿ,ಕಲ್ಲಪ್ಪ ಮಾನೆ, ವಿ.ಡಿ.ಮೇತ್ರಿ, ಎ.ಎಂ.ಪರೀಟ. ಎಂ.ಎಸ್.ದಳವಾಯಿ, ವಿ.ಎಸ್.ಅಮಲಝರಿ, ಎಸ್.ಜಿ.ಡಂಬರ, ವಿ.ಎಸ್.ದಳವಾಯಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ಕೋಟ್
"ಕುಸ್ತಿ ಹಾಗೂ ಕಬಡ್ಡಿಗೆ ಹೆಸರಾದ ಮುಧೋಳ ನಗರದಲ್ಲಿ ಇದೆ ್ರ್ರಥಮ ಬಾರಿಗೆ ಕರ್ನಾಟಕ ರಾಜ್ಯ ಹ್ಯಾಂಡಬಾಲ್ ಅಸೋಸಿಯೇಶನ್ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವತಿಯಿಂದ ಜ್ಯೂನಿಯರ್ ಬಾಲಕ ಹಾಗು ಬಾಲಕಿಯರ ರಾಜ್ಯ ಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿ ರನ್ನ ಹ್ಯಾಂಡಬಾಲ್ ವೈಭವ -2021 ಜರುಗುವದು ಮುಧೋಳದ ಕ್ರೀಡಾಪ್ರೇಮವನ್ನು ಮೆರೆಸುತ್ತಿದೆ"
-ಕಿರಣ ಘೋರೆ್ಡ ಇಓ ಮುದೋಳ