ವಿಜ್ರಂಭಣೆಯಿಂದ ಜರುಗಿದ ಶ್ರೀದೇವಿಯ ಭವ್ಯ ರಥೋತ್ಸವ
Sridevi's grand chariot festival celebrated with great pomp
ಲೋಕದರ್ಶನ ವರದಿ
ತಾಳಿಕೋಟಿ 12: ಪಟ್ಟಣದ ಭೋವಿ ವಡ್ಡರ ಸಮಾಜದ ಆರಾಧ್ಯೆ ದೇವತೆಗಳಾದ ಶ್ರೀ ಹುಲಿಗೆಮ್ಮ ದೇವಿ ಮತ್ತು ಶ್ರೀ ಗದ್ಯಮ್ಮದೇವಿ ಇವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೂರ್ತಿಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಮುಂಜಾನೆ 11:00 ಘಂಟೆಗೆ ಪಟ್ಟಣದ ಶ್ರೀ ಅಂಬಾ ಭವಾನಿ ದೇವಸ್ಥಾನದಿಂದ ಸಕಲ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆಯು ಕತ್ರಿ ಬಜಾರ, ರಾಜವಾಡೆ, ಪಂಚ ಶಹೀದ ದರ್ಗಾ ಮಾರ್ಗವಾಗಿ ಭೋವಿ ವಡ್ಡರ ನಗರದಲ್ಲಿರುವ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದಳು. ಮೆರವಣಿಗೆಯಲ್ಲಿ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಹಣಮಂತ ಕಟ್ಟಿಮನಿ, ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ದ್ಯಾವಪ್ಪ ಕೂಚಬಾಳ,ಅಧ್ಯಕ್ಷ ಶ್ರೀನಿವಾಸ ಕುಲಕರ್ಣಿ, ಉಪಾಧ್ಯಕ್ಷ ಶ್ರೀಕಾಂತ ಚಿಂಚೋಳಿ, ಕಾರ್ಯದರ್ಶಿ ಪ್ರಕಾಶ ಕೂಚಬಾಳ, ಪ್ರಧಾನ ಕಾರ್ಯದರ್ಶಿ ಭೀಮಸಿ ಕಾರಕೂರ, ಸಂಚಾಲಕ ಶಿವರಾಜ್ ಬಳವಾಟ, ಸಂಘಟನಾ ಕಾರ್ಯದರ್ಶಿ ದ್ಯಾವಪ್ಪ ಕಟ್ಟಿಮನಿ ಖಜಾಂಚಿ ನಾಗರಾಜ್ ಹಾದಿಮನಿ, ಪ್ರಮುಖರಾದ ನಾಗಪ್ಪ ಬಳವಾಟ, ದುರ್ಗಪ್ಪ ಕುಲಕರ್ಣಿ, ಹುಲಿಗೆಪ್ಪ ಕಟ್ಟಿಮನಿ, ದೇವಪ್ಪ ಕಟ್ಟಿಮನಿ, ದವಲಪ್ಪ ಕಟ್ಟಿಮನಿ, ನಿವೃತ್ತ ಶಿಕ್ಷಕ ಎಚ್.ಎನ್.ಕಟ್ಟಿಮನಿ, ಶಿಕ್ಷಕ ಆನಂದ ಡಿ ಕಟ್ಟಿಮನಿ, ತಿಮ್ಮಣ್ಣ ಹಗಟಗಿ, ಭೀಮಪ್ಪ ನಾಲತವಾಡ, ಸಾಯಬಣ್ಣ ಢವಳಗಿ, ದುರ್ಗಪ್ಪ ಕರಕೂರ, ದುರ್ಗಪ್ಪ ಹಾದಿಮನಿ, ಯಮನಪ್ಪ ಕೂಚಬಾಳ, ಹನುಮಂತ ಬಂಡಿವಡ್ಡರ, ಬಸಪ್ಪ ಡವಳಗಿ ಬಸವರಾಜ ಕಟ್ಟಿಮನಿ, ಭೀಮಸಿ ಹಗಟಗಿ, ಮಾಶಪ್ಪ ಕಾರಕೂರ,ಬಸವರಾಜ ಕಟ್ಟಿಮನಿ, ಕಾಶಿನಾಥ ಕಟ್ಟಿಮನಿ, ರಾಜು ಹಗಟಗಿ ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 