ಅಂತರರಾಷ್ಟ್ರೀಯ

ಕೊನೆಗೂ ರಾಜೀನಾಮೆ ಸಲ್ಲಿಸಿದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ

ಕೊನೆಗೂ ರಾಜೀನಾಮೆ ಸಲ್ಲಿಸಿದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ

ಕೊಲಂಬೊ:ಜುಲೈ 14 : ಕೊನೆಗೂ ಶ್ರೀಲಂಕಾ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.  ಗೋತಬಯ ರಾಜಪಕ್ಸೆ ಅವರು ದ್ವೀಪ ರಾಷ್ಟ್ರದಿಂದ ಪಲಾಯನ ಮಾಡಿದ ನಂತರ ಸಿಂಗಾಪುರಕ್ಕೆ ಬಂದಿಳಿದ ನಂತರ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬರ್ತಿದ್ದಂತೆ ಕೊಲಂಬೊದಲ್ಲಿ ಜನರು ಪಟಾಕಿ ಸಿಡಿಸಿದರು. ರಾಜಪಕ್ಸೆಯಿಂದ ರಾಜೀನಾಮೆ ಪತ್ರ ಸಿಕ್ಕಿರುವುದನ್ನು ಸಂಸತ್ತಿನ ಸ್ಪೀಕರ್ ಖಚಿತಪಡಿಸಿದ್ದಾರೆ.

ಶ್ರೀಲಂಕಾದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಮುಖ ಅಂಶಗಳು ಇಲ್ಲಿವೆ

* ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸೆಕ್ರೆಟರಿಯೇಟ್ ಮತ್ತು ಪ್ರಧಾನಿ ಕಚೇರಿ ಸೇರಿದಂತೆ ಅಧಿಕೃತ ಕಟ್ಟಡಗಳನ್ನು ವಶಪಡಿಸಿಕೊಳ್ಳುವುದನ್ನು ಕೊನೆಗೊಳಿಸುವುದಾಗಿ ಪ್ರತಿಭಟನಾಕಾರರು ಘೋಷಿಸುತ್ತಿದ್ದಂತೇ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.

* ಶ್ರೀಲಂಕಾದ ಮಾಜಿ ಅಧ್ಯಕ್ಷರು ಖಾಸಗಿ ಭೇಟಿಯಲ್ಲಿದ್ದಾರೆ. ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಸಿಂಗಾಪುರ ಸರ್ಕಾರ ಹೇಳಿದೆ.

* ಗೋತಬಯ ರಾಜಪಕ್ಸೆ ಬಂಧನಕ್ಕೊಳಗಾಗುವ ಸಾಧ್ಯತೆಯನ್ನು ತಪ್ಪಿಸಲು ಅವರು ಪಲಾಯನ ಮಾಡಿರುವ ಸಮಯದಲ್ಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

* ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಭದ್ರತಾ ಪಡೆಗಳೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

* ಸಶಸ್ತ್ರ ಪೊಲೀಸರು ಮತ್ತು ಭದ್ರತಾ ಪಡೆಗಳು ಪ್ರವೇಶಿಸುತ್ತಿದ್ದಂತೆ ವಿಕ್ರಮಸಿಂಘೆ ಅವರ ಕಚೇರಿಯಿಂದ ಹತ್ತಾರು ಕಾರ್ಯಕರ್ತರು ಹೊರಹೋಗಿದ್ದಾರೆ.  ನಾವು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯಿಂದ ಶಾಂತಿಯುತವಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತಿದ್ದೇವೆ. ಆದರೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

* ರಾಜಪಕ್ಸೆ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳುವ ಮೊದಲು ಶ್ರೀಲಂಕಾದ ಭದ್ರತಾ ಮೂಲಗಳ ಪ್ರಕಾರ ಸ್ವಲ್ಪ ಸಮಯದವರೆಗೆ ಸಿಂಗಾಪುರದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

* ರಾಜಪಕ್ಸೆ ಅವರು ಪಲಾಯನ ಮಾಡಿದ ನಂತರ ಲಕ್ಷಾಂತರ ಜನರು ರಾಜಪಕ್ಸೆ ಅವರ ಅರಮನೆಗೆ ಭೇಟಿ ನೀಡಿದ್ದಾರೆ.  ಗುರುವಾರ ಮಧ್ಯಾಹ್ನದ ವೇಳೆಗೆ ಸಶಸ್ತ್ರ ಕಾವಲುಗಾರರನ್ನು ಇರಿಸುವುದರೊಂದಿಗೆ ಗೇಟ್‌ಗಳನ್ನು ಮುಚ್ಚಲಾಯಿತು.

ಸುದ್ದಿ ಓದಿ