ಅಂತರರಾಷ್ಟ್ರೀಯ

ಶ್ರೀಲಂಕಾ: ದೇಶದಲ್ಲಿ ಸುವ್ಯವಸ್ಥೆ ಮರುಸ್ಥಾಪಿಸುವಂತೆ ಸೇನೆಗೆ ಪ್ರಧಾನಿ ಆದೇಶ

ಶ್ರೀಲಂಕಾ: ದೇಶದಲ್ಲಿ ಸುವ್ಯವಸ್ಥೆ ಮರುಸ್ಥಾಪಿಸುವಂತೆ ಸೇನೆಗೆ ಪ್ರಧಾನಿ ಆದೇಶ

ಕೊಲಂಬೊ: ಜುಲೈ 14: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ದೇಶದಲ್ಲಿ ಸುವ್ಯವಸ್ಥೆ ಮರು ಸ್ಥಾಪಿಸುವಂತೆ ಸೇನೆಗೆ ಆದೇಶ ನೀಡಿದ್ದಾರೆ. ಬುಧವಾರ ತಮ್ಮ ಕಚೇರಿಗೆ ಪ್ರತಿಭಟನಾಕಾರರು ನುಗ್ಗಿದ ಬಳಿಕ ಹಾಗೂ ದೇಶದಿಂದ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಪಲಾಯನ ಮಾಡಿದ ಬಳಿಕ ವಿಕ್ರಮಸಿಂಘೆ ಅವರು ಈ ಆದೇಶ ನೀಡಿದ್ದಾರೆ.

ಅಧ್ಯಕ್ಷ ಗೋತಬಯ ದೇಶ ತೊರೆದ ಬಳಿಕ ಪ್ರತಿಭಟನಾಕಾರರಲ್ಲಿ ಕೋಪವನ್ನು ಹೆಚ್ಚಿಸಿದ್ದು, ಪ್ರಧಾನಿಗೂ ದೇಶದಿಂದ ನಿರ್ಗಮಿಸುವಂತೆ ಒತ್ತಾಯಿಸಲು ಪ್ರಾರಂಭಿಸಿದ್ದಾರೆ.

ಹೆಚ್ಚಿನ ಶ್ರೀಲಂಕಾ ನಾಗರಿಕರು ದೇಶದ ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸೆ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡ ವಿಕ್ರಮಸಿಂಘೆ ಸಹ ದೇಶದ ಈ ಪರಿಸ್ಥಿತಿಗೆ ಕಾರಣ ಅಂತಾನೂ ದೂಷಿಸಲಾಗುತ್ತಿದೆ.

ಒಂದು ವಾರದೊಳಗೆ ರಾಷ್ಟ್ರಪತಿ ನಿವಾಸ ಮತ್ತು ನಂತರ ಪ್ರಧಾನಿ ಕಚೇರಿಯ ಮೇಲೆ ದಾಳಿ ಮಾಡಿ ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದಾರೆ.

ದೂರದರ್ಶನದ ಭಾಷಣದಲ್ಲಿ ವಿಕ್ರಮಸಿಂಘೆ, “ತಮ್ಮ ಆಕ್ರಮಿತ ಕಚೇರಿ ಮತ್ತು ಇತರ ರಾಜ್ಯ ಕಟ್ಟಡಗಳನ್ನು ತೊರೆದು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಪ್ರತಿಭಟನಾಕಾರರಿಗೆ ಕರೆ” ನೀಡಿದರು, ಆದರೂ ಪ್ರತಿಭಟನಾಕಾರರು ಅವರ ಭಾಷಣವನ್ನು ಧಿಕ್ಕರಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರಧಾನಿ ಕಚೇರಿಯಲ್ಲಿ ಹಾಜರಿದ್ದ ಪ್ರತಿಭಟನಾಕಾನೊಬ್ಬ ಮಾತನಾಡಿ, “ನಮ್ಮ ಗುರಿ ಅಧ್ಯಕ್ಷ ಮನೆಗೆ ಹೋಗುವುದಾಗಿತ್ತು. ಅಲ್ಲದೆ, ಪ್ರಧಾನಿ ರನಿಲ್ ಸೇರಿದಂತೆ ಇತರ ಸಂಪುಟದ ಸದಸ್ಯರು ಕೂಡ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ನಾವು ಬಯಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ಓದಿ