ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲಾ ಪ್ರಾರಂಭೋತ್ಸವ

ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲಾ ಪ್ರಾರಂಭೋತ್ಸವ  Sri Basaveshwara Vidyavardhaka Sangha School Commencement Ceremony

ಲೋಕದರ್ಶನ ವರದಿ 

ಯಮಕನಮರಡಿ 02: ಸಮೀಪದ ಆನಂದಪುರ ಗ್ರಾಮದ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಸುಶೀಲಾ ಸಿದ್ದಪ್ಪ ಮಲಕಾರ್ ಪ್ರಾಥಮಿಕ ಶಾಲೆಯ 2026ನೆ ಶೈಕ್ಷಣಿಕ ವರ್ಷದ , ಪ್ರಾರಂಭೋತ್ಸವ   ಸಮಾರಂಭವು ದಿ. 2 ರಂದು ಉದ್ಘಾಟಿಸಲಾಯಿತು. ಸಮಾರಂಭಕ್ಕೆ ಹತ್ತರಗಿ ಕಾರಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಹಾಗೂ ಯಮಕನಮರಡಿ ಹತ್ತರಗಿ ಹರಿ ಮಂದಿರದ ಪೂಜ್ಯರಾದ ಡಾಕ್ಟರ್ ಆನಂದ ಮಹಾರಾಜ್ ಗೋಸಾವಿ ಯವರು ಆಗಮಿಸಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ಪ್ರತಿಯೊಂದು ಕ್ಷೇತ್ರದಲ್ಲಿ ಕನ್ನಡಕ್ಕೆ ಹೆಚ್ಚಿನ ಸ್ಥಾನಮಾನ ಇರುತ್ತದೆ ಅಲ್ಲದೆ ಸುಮಾರು 2000 ವರ್ಷಗಳ ಇತಿಹಾಸವು ಕನ್ನಡ ಭಾಷೆ ಹೊಂದಿದೆ ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸುವಲ್ಲಿ ಮುಂದಾಗಿ ಅಲ್ಲದೆ ತಮ್ಮ ಮಕ್ಕಳನ್ನು ಮೊಬೈಲದಿಂದ ದೂರ ಇಡಬೇಕು, ಮನೆಯಲ್ಲಿ ಸಂಸ್ಕಾರ ನೀಡುತ್ತಿರಬೇಕು ಅಲ್ಲದೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಪಾಲಕರು ಹೆಚ್ಚಿನ ಗಮನ ಕೊಡುವಂತಾಗಬೇಕೆಂದು ಹೇಳಿದರು. ವಿಶಾಲವಾದ  ಪ್ರದೇಶದಲ್ಲಿ ಇರುವ ಶಾಲೆಯು ಮಕ್ಕಳ ಆಟಕ್ಕೆ ಕ್ರೀಡೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.  

ಅದರಂತೆ ಸಂಸ್ಥೆಯನ್ನು ಆನಂದಪುರ ಗ್ರಾಮದ ಹಾಗೂ ಹತ್ತರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಮಹಾದೇವ್ ಅವರು ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೂತನ ಸದಸ್ಯರನ್ನು ನೇಮಿಸಿಕೊಂಡು ಸದರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಮಾದರಿ ಶಾಲೆಯನ್ನಾಗಿ ಮಾಡುವದಾಗಿ ಮುಂದಾಗಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಇವರು ರಾಜಕಾರಣಿಗಳು ಅಲ್ಲದೆ ನಿಷ್ಠಾವಂತ ಸಮಾಜ ಸೇವಕರು ಆಗಿದ್ದು ಸದರಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದು ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ಹೇಳಿದರು. 

 ಅದರಂತೆ ಹತ್ತರಗಿ ಕಾರಿಮಠದ ಶ್ರೀಗಳಾದ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡುತ್ತಾ ಸದರಿ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡುವುದರ ಜೊತೆಗೆ ಇಂದಿನ ಆಧುನಿಕ ಯುಗದಲ್ಲಿ ಬೆಳೆಯುವ ಮಕ್ಕಳಿಗೆ ಸಂಪೂರ್ಣ ತರಬೇತಿ ನೀಡುವುದರ ಜೊತೆಗೆ ಬಸವತತ್ವದ ಸಂಸ್ಕಾರವನ್ನು ನೀಡುವಂತಾಗಬೇಕು. ಬಸವಣ್ಣನವರ ಎಲ್ಲಾ ವಚನಗಳು ಕನ್ನಡದಲ್ಲಿಯೇ ಇರುತ್ತವೆ ಸುಮಾರು 12ನೇ ಶತಮಾನದಲ್ಲಿ ಸಹಿತ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವುದು ಅಲ್ಲದೆ ಅನೇಕ ವಚನಗಳನ್ನು ಬಸವಣ್ಣನವರು ಕನ್ನಡದಲ್ಲಿ ಬರೆದಿದ್ದಾರೆ. ಅಂತವರ ಹೆಸರು ಸದರಿ ಸಂಸ್ಥೆಗೆ ನಾಮಕರಣ ಮಾಡಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ತಮ್ಮ ಆಶೀರ್ವಚನ ಮೂಲಕ ತಿಳಿಸಿದರು. 

 ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಮಹಾದೇವ್ ಪಟೋಳಿ, ಜೂಮಲಿಂಗ ಪಟೋಳಿ, ನಿವೃತ್ತಿ ಶಿಕ್ಷಕರಾದ ಮಠಪತಿ ಗುರುಗಳು, ಬಸವರಾಜ್ ಅತ್ತಿಮರದ, ಸಿದ್ದು ಕುಡಚಿ, ಶಾಂತಕುಮಾರ್ ಹಾಲದೇವರಮಠ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಶೈಕ್ಷಣಿಕ ವರ್ಷದ ಅಂಗವಾಗಿ ಹತ್ತರಿಗಿ ಹರಿ ಮಂದಿರದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿಯವರು 100 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ನುಗಳನ್ನು ವಿಸ್ತರಿಸಿದರೂ ಪ್ರಾರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಲಾಯಿತು. ಪ್ರಸ್ತಾವಿಕವಾಗಿ ಅಧ್ಯಕ್ಷರಾದ ಮಹಾದೇವ್ ಪಟೋಳಿಯವರು ಮಾತನಾಡುತ್ತಾ ಶಾಲೆಗೆ ಬೇಕಾಗುವ ಎಲ್ಲ ಅನುಕೂಲತೆಗಳನ್ನು ಮಾಡಿಕೊಡಲಾಗುವುದು ಅಲ್ಲದೆ ಬೇರೆ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ವಾಹನದ ವ್ಯವಸ್ಥೆಯನ್ನು ಮಾಗುವುದು ಕನ್ನಡ ಶಾಲೆ ಜೊತೆಗೆ ಸಿಬಿಎಸ್ ಶಾಲೆಯನ್ನು ಪ್ರಾರಂಭಿಸಲಾಗುವುದೆಂದು ಮಹಾದೇವ್ ಪಟೋಳಿ ಹೇಳಿದರು. ಇದೇ ಸಂದರ್ಭದಲ್ಲಿ ಪೂಜ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು ಗುರುಮಾತೆಯರು ನಿರೂಪಿಸಿ ವಂದಿಸಿದರು.