ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತೀ ಅವಶ್ಯಕ: ದಡ್ಡಿ
ಜಮಖಂಡಿ 10: ಶಾರೀರಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತೀ ಅವಶ್ಯಕತೆಯಾಗದೆ. ಕ್ರೀಡೆಯಲ್ಲಿ ಸೋಲು, ಗೆಲುವು ಬರುವುದು ಸಹಜ, ಸೋಲಿನ ಮೆಟ್ಟಿಲು ದಾಟಿ ಗೆಲುವುವನ್ನು ಸಾಧಿಸುವ ಗುರಿಯನ್ನು ಹೊಂದಬೇಕೆಂದು ಡಾ.ಎಚ್.ಜಿ.ದಡ್ಡಿ ಕರೆಯನ್ನು ನೀಡಿದರು.
ತಾಲ್ಲೂಕಿನ ಮಧುರಖಂಡಿ ಗ್ರಾಮದ ಸಾಯಿ ಸಂಕಲ್ಪ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಮುಖಾಂತರ ಶಿಸ್ತು. ಸಂಯಮ.ಭಾದ್ರುತ್ವ ಜೊತೆಗೆ ಆರೋಗ್ಯ ಬೆಳವಣಿಗೆ ಆಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕ್ರೀಡೆಗಳ ಬಗ್ಗೆ ತರಬೇತಿಯನ್ನು ನೀಡುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವದು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪಾಲಕರು ಸಹ ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಿ. ಸಮಾಜದಲ್ಲಿ ಒಳ್ಳೆಯ ಪ್ರಜೆಯನ್ನಾಗಿಸುವದು ಮಹತ್ವದಾಗಿದೆ. ಇಂದಿನ ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸದ ಹಿನ್ನೆಲೆಯಲ್ಲಿ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದು ಅವಶ್ಯಕತೆ ಇದೆ ಎಂದರು.
ಸಂಸ್ಥೆಯ ಸದಸ್ಯ ಜೋತಿ ಮೂಡಲಗಿ, ಸಂಸ್ಥೆಯ ಆಡಳಿತ ಅಧಿಕಾರಿಗಳು ಬಿ,ಎಮ್,ಮೂಡಲಗಿ, ಆರ್.ಎಸ್.ಮಲಾಬಾದಿ, ಕೆ,ಜಿ, ಮೋರಗಾಂವಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಯಿ ಸಂಕಲ್ಪ ಶಾಲೆಯ ಕಾರ್ಯದರ್ಶಿ ಎಮ್,ಎಮ್, ಮೂಡಲಗಿ ಪ್ರಾಸ್ತಾವಿಕ ಮಾತನಾಡಿದರು, ಬಿ,ಎಸ್,ಮಲಬಾದಿ ಸ್ವಾಗತಿಸಿದರು, ಸರಸ್ವತಿ ಸಬರದ ಪ್ರಾರ್ಥನಿಸಿದ್ದರು, ಎಚ್,ಆರ್, ಭೂಷನ್ನವರ ನಿರೂಪಿಸಿ, ವಂದಿಸಿದರು, ನಂತರ ಸಾಯಿ ಸಂಕಲ್ಪ ಶಾಲೆಯ ಮಕ್ಕಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದರು, ಶಾಲಾ ಮಕ್ಕಳು, ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಸಹ ಇದ್ದರು.