ಸದೃಢತೆಗೆ ಕ್ರೀಡೆ ತುಂಬಾ ಸಹಾಯಕಾರಿ: ಏ ಎಂ ಮಂಚದ
Sports are very helpful for fitness said A M Manchada
ಕೆಜಿಎಸ್ ಕ್ಲಸ್ಟರ್ ಮಟ್ಟದ 2 ದಿನದ ಕ್ರೀಡಾಕೂಟ
ಮಹಾಲಿಂಗಪುರ 22: ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಾಯಕಾರಿಯಾಗಿದ್ದು, ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ಕೆ.ಜಿ.ಎಸ್. ಕ್ಲಸ್ಟರ್ ಮಟ್ಟದ ಸಿ.ಆರ್.ಪಿ ಎ.ಎಮ್. ಮಂಚದ ಹೇಳಿದರು.ಸಿ ಕೆ ಚಿಂಚಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಮುಂಜಾನೆ ಆಯೋಜಿಸಿದ ಡಾ! ಎಸ್ ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದ 2025- 26 ನೇ ಸಾಲಿನ ಕೆ ಜಿ.ಎಸ್ ಕ್ಲಸ್ಟರ್ ಮಟ್ಟದ 2 ದಿನದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ರಾಧಾಕೃಷ್ಣನ್ ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಮತ್ತು ವಕೀಲರಾದ ಮಹಾಲಿಂಗಪ್ಪ ಗೋಕಾಂವಿ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ಯಾವುದೇ ತಾರತಮ್ಯ ಮಾಡದೆ ಎಲ್ಲ ಮಕ್ಕಳು ನಮ್ಮವರೇ ಎಂಬ ಭಾವನೆ ನಿರ್ಣಾಯಕರಲ್ಲಿ ಮೂಡಬೇಕು,ಆಗ ಭವಿಷ್ಯದ ನೈಜ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ. ಇಂದಿನ ಪ್ರಾಥಮಿಕ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿ ಕ್ರೀಡಾಕೂಟ ಯಶಸ್ವಿಗೊಳ್ಳಲಿ ಎಂದರು.
ನಂತರ ಸಂಗಮೇಶ ಮೂಕರ್ತಿಹಾಳ ಮಾತನಾಡಿ ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು.ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ' ಎಂದರು.
ಕ್ರೀಡೆಯಲ್ಲಿ ಕೆ.ಜಿ.ಎಸ್ ಕ್ಲಸ್ಟರ್ ವಲಯ ಮಟ್ಟದಲ್ಲಿ 25 ಶಾಲೆಯ 50 ದೈಹಿಕ ಶಿಕ್ಷಕರು, ಮತ್ತು 450 ಮಕ್ಕಳು ಭಾಗವಹಿಸಿದ್ದರು.
ಸಿ.ಆರ್.ಪಿ. ನವೀನ್ ಜಿಗಜಿಣಿ ಸಿ.ಕೆ.ಚಿಂಚಲಿ ಶಾಲೆಯ ಆಡಳಿತ ಮಂಡಳಿಯ ಸಿದ್ದಪ್ಪ ಚಿಂಚಲಿ, ಮಹಾಂತೇಶ ಚಿಂಚಲಿ, ಶಿಕ್ಷಕ ಬಾಲಚಂದ್ರ ಸಬರದ, ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಥ್ರೋ ಬಾಲ್ ಮತ್ತು ವಾಲಿಬಾಲ್ ಉದ್ಘಾಟನೆ ಮಾಡಿದರು. ದೈಹಿಕ ಶಿಕ್ಷಕ ವೈ .ಎ.ಮಗದುಮ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಡಾ.ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಶಶಿಧರ ಉಳ್ಳೆಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ವೇದಿಕೆಯ ಗಣ್ಯ-ಮಾನ್ಯರನ್ನು ದೈಹಿಕ ಶಿಕ್ಷಕ ಶಿಕ್ಷಕಿಯರನ್ನ ಸ್ವಾಗತಿಸಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಪಿ.ಸಿ.ಫಕೀರನ್ನವರ, ಬಿ.ಡಿ.ಕುಂಬಾಳೆ, ಎಂ.ಎಂ.ಮೂಶಿ, ಕೃಷ್ಣಪ್ಪ ಕಳವ್ವಗೋಳ ,ಎಸ್ .ಎಸ್. ಮೋದಿ, ಜಿ.ಐ.ಚಿನಗುಂಡಿ,ಹಣಮಂತ ಪಾಟೀಲ,ನಿರ್ಣಾಯಕರಾದ ಉದಯ ಮುದುಗಲ, ಹುಮಾಯನ ಸುತಾರ್, ಶ್ರೀನಿವಾಸ್ ಕಾಂಬ್ಳೇಕರ, ಸಚಿನ ಕದಂ, ಸೇರಿದಂತೆ ಕೆ.ಜಿ.ಎಸ್ ಕ್ಲಸ್ಟರ್ ಮಟ್ಟದ ಎಲ್ಲಾ ದೈಹಿಕ ಶಿಕ್ಷಕ-ಶಿಕ್ಷಕಿಯರ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಎಲ್ ಎಸ್.ಸನ್ನಕ್ಕಿ, ಪಿ.ಎಂ. ಗೋಲಭಾಂವಿ ನಿರೂಪಿಸಿ ವಂದಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 