ಕನ್ನಡ ನುಡಿ ಹಾಗೂ ಭಾಷೆಯನ್ನು ಪ್ರೀತಿಸಿ: ಡಾ. ಅನ್ನದಾನೀಶ್ವರ ಶ್ರೀ
ಮುಂಡರಗಿ 27: ಕನ್ನಡ ನುಡಿ ಹಾಗೂ ಭಾಷೆಯನ್ನು ಪ್ರೀತಿಸಿ, ಕನ್ನಡಕ್ಕಾಗಿ ದುಡಿಮೆ ಮತ್ತು ಹೋರಾಟ ಮಾಡಬೇಕೆನ್ನುವ ವ್ಯವಸ್ಥೆಯನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಕನ್ನಡ ಸಂಸ್ಕೃತಿವನ್ನು ಉಳಿಸಿ ಬೆಳೆಸುವ ಮನೋಭಾವನೆಯನ್ನು ಎಲ್ಲಾ ಕನ್ನಡಿಗರಲ್ಲಿ ಮೂಡಿಸಬೇಕು ಎಂದು ಮುಂಡರಗಿ ಜಗದ್ಗುರು ಡಾ.ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಮೂಲಕ ಹಾವೇರಿಗೆ ಹಾದುಹೋಗುವ ಕನ್ನಡ ಭುವನೇಶ್ವರಿಯ ರಥೋತ್ವವನ್ನು ಸ್ವಾಗತಿಸಿ ನಂತರ ಬೀಳ್ಕೊಟ್ಟು ಆಶಿರ್ವಾದ ನೀಡಿದ ಅವರು, ತಾಯಿ ಭುವನೇಶ್ವರಿಯನ್ನು ಪ್ರತಿಯೊಬ್ಬರೂ ಗೌರವಿಸುವದಿಂದ ಕಾಣಬೇಕೆಂದು ಹೇಳಿದರು.
ಈ ವೇಳೆ ತಹಶಿಲ್ದಾರ ಶೃತಿ ಮಳ್ಳಪ್ಪಗೌಡ್ರ ತಾಯಿ ಭುವನೇಶ್ವರಿಗೆ ಹೂಮಾಲೆಯನ್ನು ಹಾಕಿ ಗೌರವಪೂರ್ವಕ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ರಥೋತ್ಸವವು ಡಿ.1ರಿಂದ ಭುವನೇಶ್ವರಿ ಬೆಟ್ಟದ ಸಿದ್ದಾಪೂರದಿಂದ ಪ್ರಾರಂಭವಾಗಿ ಜ.5ರಂದು ಹಾವೇರಿಯಲ್ಲಿ ಜರುಗುವ ಸಮ್ಮೇಳನಕ್ಕೆ ತಲುಪುತ್ತದೆ ಎಂದು ಉಸ್ತುವಾರಿಯಾದ ನಬಿಸಾಬ ಕುಷ್ಟಗಿ ಮಾಹಿತಿ ನೀಡಿದರು.
ಈ ವೇಳೆ ಮುಂಡರಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷದ ನಾಗರಾಜ ಹಳ್ಳಿಕೇರಿ, ಕಸಪಾ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಎಸ್.ಎಚ್.ದೇಸಾಯಿ, ಪಾಲಾಕ್ಷಿ ಗಣದಿನ್ನಿ, ಎ.ಕೆ.ಮುಲ್ಲಾನವರ, ಸುರೇಶ ಭಾವಿಹಳ್ಳಿ, ದೇವೇಂದ್ರ್ಪ ರಾಮೇನಹಳ್ಳಿ, ಯಲ್ಲಪ್ಪ ಹೊಂಬಳಗಟ್ಟಿ, ಚಂದ್ರು ಪೂಜಾರ, ಮತ್ತು ಇತರರು ಇದ್ದರು.