ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
ಜಮಖಂಡಿ 05: ಬಾಲಕರ ಸರ್ಕಾರಿ ಪಿ.ಬಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಜ್ವಲ್ ದಾಶ್ಯಾಳ (ಈಜು),ಅಭಿಷೇಕ ಯಂಕಚಿ (ವಾಲಿಬಾಲ್),ರಮೇಶ ಬಡಿಗೇರ (ವ್ಹಾಲಿಬಾಲ್),ಶ್ರೀಧರ, ರಜಪೂತ (ಸೈಕ್ಲಿಂಗ್),ಸುಜಿತ ವಡ್ಡರ (ಹರ್ಡಲ್ಸ್ 110 ಮಿ) ರಾಜ್ಯ ಮಟ್ಟಕ್ಕೆ ಅಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಮಾಳಿ, ಪ್ರಾಚಾರ್ಯ ಎಸ್.ಎಸ್.ಬಿರಾದಾರ, ಉಪನ್ಯಾಸಕರು ಅಭಿನಂದಿಸಿದ್ದಾರೆ.