ಕುಕನೂರ್

ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕುಕನೂರು 08: ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳು ಸಂಘದಲ್ಲಿ ಬದ್ಧವಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣೀಕ ಸೇವೆ ಸಲ್ಲಿಸಬೇಕೆಂದು ಜಿಲ್ಲಾಧ್ಯಕ್ಷರಾದ ಬಸವರಾಜ ಗುಡ್ಲಾನೂರು ಸಲಹೆ ನೀಡಿದರು. 

ಪಟ್ಟಣ ಪ್ರವಾಸಿ ಮಂದಿರಲ್ಲಿ ಗುರುವಾರ ನಡೆದ ತಾಲೂಕ ಘಟಕದ ಪದಾಧಿಕಾರಿಗಳಲ್ಲಿ ಕುಕನೂರು ತಾಲೂಕ ಅಧ್ಯಕ್ಷರಾನ್ನಾಗಿ ನಾಗರಾಜ ಬೆಣಕಲ್ ಮತ್ತು ಉಪಾಧ್ಯಕ್ಷರಾನ್ನಾಗಿ ವೀರೇಶ್ ಇಟಗಿ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಸವರಾಜ ಕೋನಾರಿ ಮತ್ತು ಅಲ್ಲಾವುದ್ದಿನ ಎಮ್ಮಿ ಗೌರವಾಧ್ಯಕ್ಷರಾನ್ನಾಗಿ ಮತ್ತು  ಬಸವರಾಜ ಕೊಡ್ಲಿಯವರನ್ನು ಉಪಾಧ್ಯಕ್ಷರಾಗಿ ಮತ್ತು ರುದ್ರೇಶ ಆರುಬೆರಳಿನ್ ಸಂಘದ ಖಜಾಜಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು ಘೋಷಣೆ ಮಾಡಿದರು. 

ಪತ್ರಿಕಾ ಧರ್ಮವನ್ನು ಕಾಪಾಡವುದರ ಜೊತೆಗೆ ವರದಿಗಾರರು ತಮ್ಮ ಬರವಣೆಗಳ ಮೂಲಕ ವಸ್ತನಿಷ್ಠೆ ಹಾಗೂ ಮಾನವೀಯ ಹಾಗೂ ನೈತಕ ಮೌಲ್ಯಗಳನ್ನ ಒಳಗೊಂಡಂತೆ ಮತ್ತು ಸಮಾಜವನ್ನು ತಿದ್ದಿ ತೀಡುವ,ಒಳಿತನ್ನು ಕಾಪಾಡಿಕೊಂಡು ವರದಿ ಮಾಡಿ ಎಂದು ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯೆ ಸಾದೀಕ್‌ಅಲಿ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ರಾಜ್ಯ ಕಾ,ಕಾ ವಿಶೇಷ ಪ್ರತಿನಿದಿ ಎಚ್‌.ಎಚ್‌..ಹರೀಶ, ಜಿಲ್ಲಾ ಉಪಾಧ್ಯಕ್ಷರಾದ ಹನಮಂತ ಹಳ್ಳಿಕೇರಿ, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು ವೀರಯ್ಯ ಹಿರೇಮಠ, ಮಂಜುನಾಥ ಪ್ರಸಾದ, ರುದ್ರ​‍್ಪ ಭಂಡಾರಿ ಹಾಗೂ ಕುಕನೂರು ಕಾರ್ಯನರತ ಪತ್ರಕರ್ತ ಸಂಘದ ಸದಸರಾದ ಮುರಾರಿ ಭಜಂತ್ರಿ, ಅಮರೇಶ್ವರಸ್ವಾಮಿ ಕಂದಗಲಮಠ, ಚಂದ್ರು ದೊಡ್ಡಮನಿ, ಕನಕರಾಯ ಭಜಂತ್ರಿ, ಶಿವರಾಜ ದೊಡ್ಡಮನಿ, ಸುನೀಲ್‌ಮಠದ, ವೀರಯ್ಯ ಪೂಜಾರ, ಚಂದ್ರು ಆರುಬೆರಳಿನ್, ಬಸವರಾಜ ಬಿಡನಾಳ, ಚನ್ನಯ್ಯ ಹಿರೇಮಠ, ಲಕ್ಷ್ಮಣ್ಣ ಚಲುವಾದಿ, ಬಸವರಾಜ ಕೊಪ್ಪದ್, ಶರಣಯ್ಯ, ಸೇರಿದಂತೆ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. 


ಸುದ್ದಿ ಓದಿ