ಜಮಖಂಡಿ

ರಸಗೊಬ್ಬರದಲ್ಲಿ ಮರಳು ಕಲಬೆರಕೆ: ರೈತರಿಗೆ ವಂಚನೆ

ರಸಗೊಬ್ಬರದಲ್ಲಿ ಮರಳು ಕಲಬೆರಕೆ: ರೈತರಿಗೆ ವಂಚನೆ

ಜಮಖಂಡಿ 29: ತಾಲೂಕಿನ ಸಾವಳಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸರಬರಾಜಾಗುವ 24:24 ಜೈ ಕಿಸಾನ ರಸಗೊಬ್ಬರದಲ್ಲಿ ಮರಳು ಮಿಶ್ರಿತ ಗೊಬ್ಬರವನ್ನು ಪ್ಯಾಕ ಮಾಡಿ ರೈತರಿಗೆ ವಂಚನೆ ಮಾಡಲಾಗಿದೆಂದು ರೈತರು ಆರೋಪಿಸಿದ್ದಾರೆ. 

ಜೈಕಿಸಾನ ಗೊಬ್ಬರದ ಅಸಲಿ ಕರಾಳತೆಯನ್ನು ಪತ್ತೆ ಹಚ್ಚಲು ಪ್ಯಾಕನಲ್ಲಿದ್ದ ಗೊಬ್ಬರವನ್ನು ನೀರಿನೊಂದಿಗೆ ಕಲಬೆರಿಕೆ ಮಾಡಿದಾಗ 50 ಕಿ.ಗ್ರಾಂ. ಗೊಬ್ಬರವನ್ನು ಅಂದಾಜು 6 ಕಿ.ಗ್ರಾಂ. ಮರಳು ಪತ್ತೆಯಾಗಿದ್ದು ವಂಚನೆಗೊಳಗಾದ ರೈತರು ಪಿಕೆಪಿಎಸ್ ಮುಂದೆ ಜಮಾಯಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ಗೊಬ್ಬರದ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದರು. ರೈತರು ನಕಲಿ ಗೊಬ್ಬರ ಸಮೇತ ವ್ಯವಸ್ಥಾಪಕ ಮಹಾದೇವ ಜಾಧವ ಅವರ ಹತ್ತಿರ ನ್ಯಾಯ ಕೇಳಲು ಹೋದರೆ ರೈತರನ್ನು ಬೆದರಿಸಿದ ಘಟನೆ ನಡೆದಿದೆ. ನಕಲಿ ರಸಗೊಬ್ಬರ ನೀಡಿ ರೈತರಿಗೆ ಪಂಗನಾಮ ಹಾಕುತ್ತಿದ್ದಾರೆ. ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ರೈತರಾದ ಧನಂಜಯ ಕ್ಷೀರಸಾಗರ, ಶ್ರೀನಾಥ ಸೂರ್ಯವಂಶಿ, ಭೀಮಣ್ಣ ಮಾನೋಜಿ, ಶಂಕರ ಮೈಗೂರ, ಕಲ್ಲಪ್ಪ ನಾಂದ್ರೇಕರ ಸೇರಿದಂತೆ ಹಲವು ರೈತರು ಆರೋಪಿಸಿದ್ದಾರೆ.

ತಾಲೂಕಾ ಕೃಷಿ ಇಲಾಖೆಯ ಅಧಿಕಾರಿ ಆರ್.ಬಿ.ಬಿದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ರಸಗೊಬ್ಬರವನ್ನು ಲ್ಯಾಬ್ಗೆ ಕಳುಹಿಸಲಾಗಿದ್ದು. ರಸಗೊಬ್ಬರ ಲ್ಯಾಬ್ ತಪಾಸಣೆಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

 

ಸುದ್ದಿ ಓದಿ