ಅ.20ರಂದು ಸತ್ಯಕಾಮ ಆರಾಧನೆ ವಿಶೇಷ ಕಾರ್ಯಕ್ರಮ
ಜಮಖಂಡಿ 16: ಸನಾತನ ಭಾರತದೇಶದ ವಿವಿಧ ಆಚಾರ-ವಿಚಾರ, ಸಂಸ್ಕೃತಿ, ಪರಂಪರೆಗಳ ಮಾಹಿತಿ ಸಹಿತ ಸತ್ಯದ ಕಡೆ ಸಾಗುವ ನಡೆಯೇ ಸತ್ಯಕಾಮ ಆರಾಧನೆಯ ಮುಖ್ಯಉದ್ದೇಶವಾಗಿದೆ ಎಂದು ಸತ್ಯಕಾಮ ಪ್ರತಿಷ್ಠಾನ ಮುಖ್ಯಸ್ಥೆ ವೀಣಾ ಬನ್ನಂಜೆ ಹೇಳಿದರು.
ನಗರದ ರಮಾನಿವಾಸ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕಾಮ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತಾಲೂಕಿನ ಕಲಹಳ್ಳಿಯ ಸುಮ್ಮನೆ ಆವರಣದಲ್ಲಿ ಅ.20 ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆವರೆಗೆ ಸತ್ಯಕಾಮ ಆರಾಧನೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ಹಿಂದು ಪರಂಪರೆಯಲ್ಲಿ ಧರ್ಮದ ಮೇಲೆ ನಮ್ಮ ಜನಾಂಗದ ದ್ವೇಷವಿಲ್ಲ ಆದರೆ ನಮ್ಮ ಹಿಂದು ಧರ್ಮದ ವಿರೋಧಿಗಳನ್ನು ಧಿಕ್ಕರಿಸುತ್ತದೆ. ಹಿಂದುಗಳು ಎಂದಿಗೂ ಅವ್ಯವಸ್ಥೆಯಲ್ಲಿ ತೊಡಗಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಾತ್ಮಾ ಗಾಂಧಿಜೀ ಅವರನ್ನು ಅವಹೇಳನ ಮಾಡುವ ಪ್ರವೃತ್ತಿ ಆರಂಭಗೊಂಡಿದ್ದ ದುರದುಷ್ಟಕರ. ಮಹಾತ್ನಾ ಗಾಂಧಿಜೀ ಕೂಡ ರಾಮರಾಜ್ಯ ಕನಸು ಕಂಡಿದ್ದರು ಎಂದರು.
ಅ.19 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಕಲಹಳ್ಳಿಯಲ್ಲಿ ಸುಮ್ಮನೆಯ ಆವರಣದಲ್ಲಿ 1 ಕೋಟಿ ನಾರಾಯಣ ನಾಮಜಪ ಮತ್ತು ಪುರುಷಸೂಕ್ತ ಹೋಮ ಪ್ರಾರಂಭ ಆರಂಭವಾಗಲಿದೆ. ಒಂದು ದಿನದಲ್ಲಿ ಮುಗಿಯದ ಹಿನ್ನಲೆಯಲ್ಲಿ ಪ್ರತಿ ರವಿವಾರ ಸೇರಿದಂತೆ 1 ಕೋಟಿ ನಾರಾಯಣ ನಾಮಜಪ ನಿರಂತರವಾಗಿ ನಡೆಯಲಿದೆ. ಶ್ರೀರಾಮ ದರ್ಶನ ಪರಿಕಲ್ಪನೆ, ತಾಳಮದ್ದಲೆ ಅಭಿನವ ನೃತ್ಯ ಸಂಘದಿಂದ ನಿರುಪಮಾ ಮತ್ತು ರಾಜೇಂದ್ರ ರಾಮನ ಬದುಕಿನ ಆಯ್ದ ಸನ್ನಿವೇಶಗಳ ವಿಶೇಷ ಕಥಾ ಕೀರ್ತನ ನಾಟ್ಯ ಸೇವೆ ನಡೆಯಲಿದೆ ಎಂದರು.
ಬೆಂಗಳೂರಿನ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ, ವಿಭು ಅಕಾಡೆಮಿಯ ಡಾ.ವಿ.ಬಿ.ಆರತಿ, ಯುವ ಬ್ರಿಗೇಡ್ದ ಚತ್ರವರ್ತಿ ಸೂಲಿಬೆಲೆ, ವಿದ್ವಾಂಸ ಕೃಷ್ಣರಾಜ ಕುತ್ಪಾಡಿ ಸಹಿತ ಅಂತರಾಷ್ಟ್ರೀಯ ಭಾರತೀಯರ ಕಲಾವಿದ ತಂಡದ ಸದಸ್ಯರು ಆಗಮಿಸಲಿದ್ದಾರೆ ಎಂದರು.
ಸತ್ಯಕಾಮ ಉಪಾಧ್ಯಕ್ಷ ಅಣ್ಣಪ್ಪ ನಂದಗಾವ, ಕಾರ್ಯದರ್ಶಿ ಪಾವನ ಶಹಪೂರ, ಆರ್.ಪಿ. ನ್ಯಾಮಗೌಡ, ಸಂಜಯ ಮಾಲಘಾಣ ಸುದ್ದಿಗೋಷ್ಠಿಯಲ್ಲಿ ಇದ್ದರು.