ಬ್ಯಾಡಗಿ ಬಿಜೆಪಿಯಿಂದ ಸಸಿ ನೆಡುವ ಕಾರ್ಯಕ್ರಮ
ಬ್ಯಾಡಗಿ 06 : ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಶುಕ್ರವಾರ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂದೆ ಉದ್ಯಾನವನದಲ್ಲಿ ಸಸಿ ನೆಡುವ ಮುಖಾಂತರ ಪರಿಸರ ದಿನಾಚರಣೆ ಆಚರಿಸಲಾಯಿತು.ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಪ್ರಾಣಿ ಪಕ್ಷಿ ಒಳಗೊಂಡು ಜೀವ ಸಂಕುಲ ಉಳಿಸಲು ನಾವೆಲ್ಲರೂ ಅವಶ್ಯವಿರುವ ಕಡೆಗೆ ಸಸಿಗಳನ್ನು ನೆಟ್ಟು ಪೋಷಿಸಿದರೆ ಮಾತ್ರ ಪ್ರಾಕೃತ್ತಿಕ ಸಂಪತ್ತು ಹೆಚ್ಚಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ ಹಿರೇಮಠ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವಿಜಯ ಮಾಳಗಿ, ಮಹಿಳಾ ಮೋರ್ಚಾ ಅಧ್ಯಕ್ಷ ಸರೋಜಾ ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಕಲಾವತಿ ಬಡಿಗೇರ, ಗಾಯತ್ರಾ ರಾಯ್ಕರ ಬಸಮ್ಮ ಹೆಡಿಯಾಲ, ಶಂಕ್ರ್ಪ ಅಕ್ಕಿ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಹನುಮಂತಪ್ಪ ಮ್ಯಾಗೇರಿ, ನಾಗರಾಜ ಹಾವನೂರ, ವಿಷ್ಣುಕಾಂತ ಬೆನ್ನೂರು, ಜಿತೇಂದ್ರ ಸುಣಗಾರ, ಪರಶುರಾಮ ಉಜನಿಕೊಪ್ಪ, ಶಿವಯೋಗಿ ಗಡಾದ, ಎಸ್.ಸಿ ಮೋರ್ಚಾ ಅಧ್ಯಕ್ಷರಾದ ನಾಗರಾಜ್ ದೊಡ್ಡಮನಿ, ಈರಣ್ಣ ಕೊಪ್ಪದ ಇದ್ದರು.